ಒಂಟಿ ಹೃದಯದ ಅಸಹನೀಯ ಬದಕು

ಒಂಟಿ ಹೃದಯದ ಅಸಹನೀಯ ಬದಕು

ಚೆನ್ನೈ, ಆ. 23 : ಒಬ್ಬಂಟಿಯಾಗಿ ಅಸಹನೀಯ ಸ್ಥಿತಿಯಲ್ಲಿ ಬದಕುತ್ತಿರುವ ಈ ಅಜ್ಜಿಗೆ ಯಾರು ಇಲ್ಲ. ಮಗಳಿದ್ದರೂ ಸಮೀಪಕ್ಕೆ ಸುಳಿಯೂತ್ತಿಲ್ಲ. ಶೌಚಾಲಯದಲ್ಲಿ ಬದುಕುತ್ತಿರುವಂತಹ ದು:ಸ್ಥಿತಿ ಇವಳದು. ಒಬ್ಬಂಟಿಯಾಗಿ ಬದಕು ನಡೆಸುತ್ತಿರುವ ಈಕೆಗೆ ಮನೆ ಸೂರಿಲ್ಲ. ಸೂರು ಪಡೆಯಲು ಹಲವಾರು ದಶಕಗಳಿಂದ ಕಾಯುತ್ತಿದ್ದಾಳೆ. ಜನಪ್ರತಿನಿಧಿಗಳಿಗೆ ಇವಳ ನೋವು ಕೇಳಿಸುತ್ತಿಲ್ಲ. ಇದು 65 ವರ್ಷದ ವೃದ್ಧೆ ಕರುಪ್ಪಾಯಿ ದು:ಖದ ಸಂಗತಿಗಳು. ಇವಳು 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿರುವ ಮನಕಲಕುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿ ಬಂದಂತಹ ಹಣದಿಂದ ಜೀವನ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿರುವ ವೃದ್ಧೆ, ಹಿರಿಯ ನಾಗರಿಕ ಪಿಂಚಣಿಗಾಗಿ ನಾನು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದೇನೆ. ಅದು ಆಗದಿದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೇನೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜೀವನ ನಡೆಸಲು ನನಗೆ ಬೇರೆ ಆಧಾರವಿಲ್ಲ. ಹೀಗಾಗಿ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos