ಒಂಟಿ’ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆಮಾರಾಟ

ಒಂಟಿ’ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆಮಾರಾಟ

ಬೆಂಗಳೂರು, ಜೂ. 29: ಕನ್ನಡ ಚಿತ್ರರಂಗದಲ್ಲಿ ಇತ್ತಿಚಿನ ದಿನಗಳಲ್ಲಿ ಬಹು ಮೊತ್ತದ ಚಿತ್ರಗಳು ಮುಡಿಬರುತ್ತಿದ್ದು, ಇದೀಗ ಮತ್ತೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದುವೇ ‘ಒಂಟಿ’ ಸಿನಿಮಾ. ಆರ್ಯವರ್ಧನ್ ಹಾಗೂ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ‘ಒಂಟಿ’ ಚಿತ್ರ ಇದೇ ಜುಲೈ 5ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಕೆಲದಿನಗಳ ಹಿಂದೆಯಷ್ಟೇ ಈ ಚಿತ್ರ ಟ್ರೇಲರ್ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಅದರಂತೆ ಇದೀಗ ಈ ಚಿತ್ರ ಬಿಡುಗಡೆ ಮುನ್ನವೇ ಸುದ್ದಿ ಮಾಡುತ್ತಿದೆ.

ಇದೀಗ ‘ಒಂಟಿ’ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ನಲ್ಲಿ 1.24 ಕೋಟಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು, ಬಿಡುಗಡೆಯಾದ ಮೇಲೆ ಇನ್ಯಾವ ರೀತಿಯಲ್ಲಿ ಸದ್ದು ಮಾಡುತ್ತಿದೆ ಎಂದು ಕಾದು ನೋಡಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos