ವೈದ್ಯರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾದ್ಯ

ವೈದ್ಯರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾದ್ಯ

ಬೆಂಗಳೂರು, ಡಿ. 28: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ  ಹೆಚ್ಚಿನ ಆದ್ಯತೆ ನೀಡಿ ಅವರನ್ನು ಹೆಚ್ಚಾಗಿ ಹೆಚ್ಚಿನ ತರಬೇತಿ ನೀಡಿ ವೃತ್ತಿಪರ ವೈದ್ಯಕೀಯ ಕೋರ್ಸ್ ನಲ್ಲಿ ಸೀಟ್ ದೊರಕುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.ಆರ್. ಅಕಾಡೆಮಿ  ರಾಜ್ಯದ ಭವಿಷ್ಯದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದ್ದು, 216 ವಿದ್ಯಾರ್ಥಿಗಳು ನೀಟ್ ಪ್ರವೇಶ ಪರೀಕ್ಷೆಯಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಆವರಣದಲ್ಲಿ ಸಂಭ್ರಮಾಚರಣೆ ಆಯೋಜಿಸಲಾಗಿತ್ತು.

ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು, ಪೋಷಕರ ಸಂತಸಕ್ಕೆ ಕೊನೆಯೇ ಇರಲಿಲ್ಲ. ಬಹುದಿನಗಳ ಕನಸನ್ನು ನನಸು ಮಾಡಿದ ಡಿ.ಆರ್. ಅಕಾಡೆಮಿ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್ ಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ, ಸಜ್ಜುಗೊಳಿಸಿದ ಪರಿಶ್ರಮದ ಬಗ್ಗೆ ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದ್ದರು. ಪೋಷಕರು, ಪಾಲಕರು ಡಿ.ಆರ್.ಅಕಾಡೆಮಿಯ ವೇಗಕ್ಕೆ ತಕ್ಕಂತೆ ನಮ್ಮ ಮಕ್ಕಳನ್ನು  ಪ್ರತಿಯೊಂದು ಹಂತದಲ್ಲಿಯೂ ಹುರಿದುಂಬಿಸಿ ಯಶಸ್ಸಿನತ್ತ ಕೊಂಡೊಯ್ದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರು.

ಡಿ.ಆರ್. ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ. ದೇವೇಂದ್ರ ರೆಡ್ಡಿ ಹಾಗೂ ಇತರೆ ನಿರ್ದೇಶಕರು ನಿಯಮಿತವಾಗಿ ನೀಡುತ್ತಿದ್ದ ಮಾರ್ಗದರ್ಶನದಿಂದ ಇಂತಹ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಯಿತು. 2018ರಲ್ಲಿ 123 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. 2019ರಲ್ಲಿ 216 ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವ ಹಾದಿ ಸುಗಮಗೊಳಿಸಿದ ಪರಿ ಬೆರಗುಗೊಳಿಸುವಂತಹದ್ದು ಎಂದು ಚರ್ಚಿಸುತ್ತಿದ್ದರು.

ನಾಡೋಜ ಡಾ. ಮಹೇಶ್ ಜೋಷಿ, ಸಂಭ್ರಮೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ದೃಢ ನಿಶ್ಚಯ, ದೃಢ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರು ಸ್ಫೂರ್ತಿಯಾಗಬೇಕು. ಅವರ ಸಂದೇಶಗಳನ್ನು ಪಾಲಿಸಿದರೆ ಎಲ್ಲರಿಗೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.ವೈದ್ಯರಲ್ಲಿ ಪ್ರಾಮಾಣಿಕತೆ ಬಹಳ ಪ್ರಮುಖ ಮುಖ್ಯವಾದದ್ದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದ್ದಾರೆ .

ನೀವು ವೈದ್ಯಕೀಯ ವೃತ್ತಿ ಆರಿಸಿಕೊಂಡಿದ್ದು, ಇದೀಗ ನಿಮ್ಮ ದಿಕ್ಕು ಬದಲಾಗಿದೆ.  ವೈದ್ಯರಿಗೆ ಮಾನವೀಯ ಗುಣಗಳಿರಬಹುದು. ಜನ ಸಾಮಾನ್ಯರು ನಿಮ್ಮನ್ನು ದೇವರಂತೆ ನೋಡುತ್ತಾರೆ. ನೀವು ಸಹ ದೇವರ ಸ್ಥಾನದಲ್ಲಿ ನಿಂತು ರೋಗಿಗಳ ಸೇವೆ, ಆರೈಕೆ ಮಾಡಬೇಕು. ಆರೋಗ್ಯವಂತ ವ್ಯಕ್ತಿಗಳನ್ನಷ್ಟೇ ಅಲ್ಲ, ಆರೋಗ್ಯವಂತ ಸಮಾಜ, ರಾಷ್ಟ್ರ ನಿರ್ಮಾಣ ಮಾಡುವಂತೆ ಕರೆ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ದೇವೇಂದ್ರ ರೆಡ್ಡಿ ಮಾತನಾಡಿ, ಶಿಕ್ಷಣದಲ್ಲಿ ಶಿಸ್ತು, ಸಿದ್ಧತೆ, ಬದ್ಧತೆ ಇರದ್ದರಷ್ಟೇ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾದರೆ ಅಧ್ಯಯನದ ಗುಣಮಟ್ಟ ಕುಸಿತವಾಗುತ್ತದೆ. ಇದಕ್ಕೆ ಅವಕಾಶ ನೀಡಬೇಡಿ. ನಿರಂತರ ಕಲಿಕೆ ನಿಮ್ಮನ್ನು ಔನತ್ಯಕ್ಕೆ ಕೊಂಡೊಯ್ಯುತ್ತದೆ ಎಂದರು.

ದಾಸರ ಹಳ್ಳಿ ನಗರ ಸಭೆ ಮಾಜಿ ಅಧ್ಯಕ್ಷ ಕೆ.ಸಿ. ಅಶೋಕ್, ಡಿ.ಆರ್ ಅಕಾಡೆಮಿಯ ನಿರ್ದೇಶಕರಾದ ಎಂ.ರಾಮಕೃಷ್ಣ, ಬಿ.ವಿ. ಚಾರಿ, ಎ. ಚಂದ್ರಶೇಖರ್, ಎಂ. ರವಿ, ಎಂ. ಕೋಟೇಶ್ವರಾವ್  ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos