ಪುಟ್ಟ ಮಕ್ಕಳಿಗೆ ಆನ್​ಲೈನ್ ಕ್ಲಾಸ್?

  • In State
  • May 18, 2020
  • 160 Views
ಪುಟ್ಟ ಮಕ್ಕಳಿಗೆ ಆನ್​ಲೈನ್ ಕ್ಲಾಸ್?

 

ಬೆಂಗಳೂರು; ಮೇ,18: ಕೊರೋನಾ ವೈರಸ್ ಸೋಂಕು ಭಯದಿಂದಾಗಿ ಈ ಬಾರಿಯ ಬೇಸಿಗೆ ರಜೆಯನ್ನು ಮಕ್ಕಳು ಎಂಜಾಯ್ ಮಾಡಲು ಆಗುತ್ತಿಲ್ಲ. ಮೊದಲೇ ಮೊಬೈಲ್​ಗೆ ಅಂಟಿಕೊಳ್ಳುತ್ತಿದ್ದ ಮಕ್ಕಳಿಗೆ ಇದು ಹಾಸಿಗೆ ಹಾಸಿಕೊಟ್ಟಂತಾಗಿದೆ. ಕೊರೋನಾ ಎಫೆಕ್ಟ್ ಹೊರಗೆ ಹೋಗದಂತೆ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಅನಿವಾರ್ಯವಾಗಿ ಪೋಷಕರ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕೂತು ಮಕ್ಕಳು ವೀಡಿಯೋ ಗೇಮ್ ಆಡುತ್ತ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಮನೆಯಿಂದ ಹೊರ ಹೋಗಲು ಆಗದೆ ಮನೆಯೊಳಗೆ ಮೊಬೈಲ್, ಟಿವಿ ಮುಂದೆ ಪುಟಾಣಿಗಳು ಕಣ್ಣು ನೋವು ತರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು ಮಹಾನಗರಿಯಲ್ಲಿ ಬೇಸಿಗೆ ಬಂತAದ್ರೆ ಸಮ್ಮರ್ ಕ್ಯಾಂಪ್ ಆರಂಭವಾಗುತ್ತಿತ್ತು. ಪೋಷಕರು ಮಕ್ಕಳಿಗೆ ಸ್ವಿಮ್ಮಿಂಗ್, ಏರೋಬಿಕ್ಸ್ ಸೇರಿದಂತೆ ಆಟಪಾಠಗಳಿಗೆ ಆಸಕ್ತಿ ವಹಿಸುವ ಶಿಬಿರಗಳಿಗೆ ಕಳುಹಿಸುತ್ತಿದ್ದರು. ಆದರೆ ಈ ಬಾರಿ ಫೆಬ್ರವರಿ ಕೊನೆಯ ವಾರದಿಂದ ಕಾಣಿಸಿಕೊಂಡ ಕೊರೋನಾ ಸೋಂಕು ಮಕ್ಕಳಿಗೆ, ಪೋಷಕರಿಗೆ ಹೆಚ್ಚು ಕಾಡತೊಡಗಿತು. ಈ ಕಾರಣಕ್ಕೆ ಶಾಲಾಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿತು. ಇದರಿಂದಾಗಿ ಸಮ್ಮರ್ ಕ್ಯಾಂಪ್ ನಿಷೇಧಿಸಲಾಯಿತು.

ಮನೆಯಿಂದ ಮಕ್ಕಳನ್ನು ಹೊರಗಡೆ ಕಳುಹಿಸದೇ ಮಕ್ಕಳನ್ನು ಕಟ್ಟಿಹಾಕಲು ಮೊಬೈಲ್ ನೀಡಬೇಕಾಯಿತು. ಇದರಿಂದಾಗಿ ಮಕ್ಕಳು ಮನೆಯೊಳಗೆ ಕಡಿಮೆ ಬೆಳಕಿನಲ್ಲಿ ಅತಿ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಕಣ್ಣು ಉರಿ, ಕಣ್ಣು ನೋವು, ಕಣ್ಣಿನಲ್ಲಿ ನೀರು ಬರುವುದು ಹೀಗೆ ನೇತ್ರಗಳಿಗೆ ಸಂಬAಧಿಸಿದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನ ಪ್ರಮುಖ ಕಣ್ಣಿನ ಆಸ್ಪತ್ರೆಗಳು ಸೇರಿದಂತೆ ಪುಟ್ಟ ಕಣ್ಣಿನ ಕ್ಲಿನಿಕ್‌ಗಳಿಗೆ ಪೋಷಕರು ತಮ್ಮ ಮಕ್ಕಳಿಗೆ ಕಣ್ಣಿನ ತೊಂದರೆ ಬಗ್ಗೆ ಚಿಕಿತ್ಸೆ ಕೊಡಿಸಲು ಆಗಮಿಸುತ್ತಿದ್ದಾರೆ. ಬಹುತೇಕ ಪೋಷಕರು ಕಣ್ಣಿನ ವೈದ್ಯರಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

ನನಗಿಬ್ಬರು ಮಕ್ಕಳು. ಅವರಿಬ್ಬರೂ ಮಕ್ಕಳಿಗೆ ಕೊರೊನೋ ಭಯದಿಂದ ಹೊರಗಡೆ ಕಳುಹಿಸುತ್ತಿಲ್ಲ. ಟಿವಿ, ಕಂಪ್ಯೂಟರ್, ಮೊಬೈಲ್ ನಲ್ಲಿ ಸಿನಿಮಾ ನೋಡುವುದು, ಗೇಮ್ ಆಡೋದು ಮಾಡುತ್ತಿದ್ದಾರೆ. ಇದರಿಂದಾಗಿ ಇದರಿಂದಾಗಿ ಮಕ್ಕಳಿಗೆ ಕಣ್ಣು ಉರಿ ಬರುತ್ತಿದೆ. ಪದೇ ಪದೇ ಕಣ್ಣುತಿಕ್ಕಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಕ್ಲಾಸ್ ಶುರುವಾಗಿರುವುದರಿಂದ ಹೆಚ್ಚಾಗಿ ಸ್ಕ್ರೀನ್ ನೋಡುವುದರಿಂದ ಮಕ್ಕಳಿಗೆ ಕಣ್ಣಿಗೆ ಹೆಚ್ಚು ಶ್ರಮವಾಗ್ತಿದೆ. ಎಷ್ಟು ಹೇಳಿದರೂ ಗೇಮ್ ಆಡುವುದನ್ನು ಬಿಡೋಲ್ಲ’ ಎಂದು ಬನ್ನೇರುಘಟ್ಟದ ನಿವಾಸಿ ಗೃಹಿಣಿ ಸೌಮ್ಯ ಹೇಳುತ್ತಾರೆ.

ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನ್ನು ಕೆಲ ಶೈಕ್ಷಣಿಕ ಸಂಸ್ಥೆಗಳು ಆರಂಭಿಸಿವೆ. ಇದರಿಂದ ಪುಟ್ಟ ಪುಟ್ಟ ಮಕ್ಕಳು  ಕಣ್ಣು ಪಿಳುಕಿಸದೇ ನೋಡುವುದರಿಂದ ಕಣ್ಣಿನ ತೊಂದರೆ ಅನುಭವಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲ ಹಿರಿಯರು, ಮನೆಯಲ್ಲಿ ಕಾಲ ಕಳೆಯಲು ಮೊಬೈಲ್​ನಲ್ಲಿ ಸಿನಿಮಾ ನೋಡುವುದರಿಂದ ಅವರಿಗೆ ಕಣ್ಣಿನ ಮೇಲೆ ಒತ್ತಡ ಆಗುತ್ತಿದೆ. ಇದು ಒಳ್ಳೆಯದಲ್ಲ. ಮಕ್ಕಳು ಹೆಚ್ಚು ಬೆಳಕು ಇರುವ ಕಡೆ ಅಗತ್ಯವಿದ್ದಷ್ಟು ಮಾತ್ರ ಮೊಬೈಲ್ ಬಳಕೆ ಮಾಡಲಿ. ಸದಾ ಮನೆಯೊಳಗೆ ಇರುವುದರಿಂದ ದೂರದೃಷ್ಟಿ ತೊಂದರೆ ಸಾಧ್ಯತೆ ಹೆಚ್ಚಿದೆ. ಕೊರೊನೋ ಸೋಂಕಿನ ಬಗ್ಗೆ ಜಾಗೃತೆಯಿರಲಿ. ಅತಿಯಾದ ಭಯ ಬೇಡ ಎಂದು ಕಣ್ಣಿನ ವೈದ್ಯ ಡಾ. ಪರಶುರಾಮ್ ಹೇಳುತ್ತಾರೆ.

ರಾಜ್ಯವಾರು ಕೊರೋನಾ ಪ್ರಕರಣಗಳ ವಿವರಇನ್ನು ಪುಟ್ಟ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುತ್ತಿರುವ ಕೆಲ ಶಿಕ್ಷಣ ಸಂಸ್ಥೆಗಳ ಕ್ರಮದ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ‘ಎಲ್​​ಕೆಜಿ ಮತ್ತು ಯುಕೆಜಿಯ ಆ ಕಂದಗಳಿಗೂ ಆನ್​ಲೈನ್​​ ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? ಹಣದ ದುರಾಸೆಯಷ್ಟೇ. ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos