ಈರುಳ್ಳಿಯಲ್ಲಿ ಅಡಗಿದೆ ನಮ್ಮ ಆರೋಗ್ಯ

ಈರುಳ್ಳಿಯಲ್ಲಿ ಅಡಗಿದೆ ನಮ್ಮ ಆರೋಗ್ಯ

ಬೆಂಗಳೂರು: ನಮ್ಮ ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡುವುದು ತುಂಬಾ ಕಷ್ಟಕರವಾಗಿದೆ. ನಾವು ದಿನನಿತ್ಯ ಬಳಸುವಂತಹ ತರಕಾರಿಗಳಲ್ಲಿ ನಮ್ಮ ಆರೋಗ್ಯ ಅಡಗಿದೆ ಯಾವ ಯಾವ ತರಕಾರಿ ಯಾವ ರೋಗಕ್ಕೆ ಉತ್ತಮ ಎಂದು ನಾವು ತಿಳಿಯಬೇಕಾಗಿದೆ. ಈರುಳ್ಳಿ ನಾವು ದಿನನಿತ್ಯ ಅಡುಗೆ ಮಾಡುವುದಕ್ಕೆ ಬಳಸುತ್ತೀರಿ ಆದರೆ ಈರುಳ್ಳಿಯನ್ನು ನಾವು ಹಸಿಯಾಗಿ ತಿನ್ನುವುದರಿಂದ ನಮ್ಮ ಆರೋಗ್ಯ ಸಹ ವೃದ್ಧಿಯಾಗುತ್ತದೆ ನಾವು ಆರೋಗ್ಯವಂತರಾಗಿರಬಹುದು.

ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ

ಈರುಳ್ಳಿಯಲ್ಲಿರುವ ಸಲ್ಫರ್ ಅಂಶವು ಪ್ರೋಟೀನ್‌ ನ ರಚನೆಯನ್ನು ಹೆಚ್ಚಿಸುತ್ತದೆ ಮತ್ತು ಫ್ಲೇವನಾಯ್ಡ್ ಗಳು, ಉತ್ಕರ್ಷಣ ನಿರೋಧಕ ಸಂಯುಕ್ತಗಳ ಕ್ರಿಯೆಯ ಮೂಲಕ ಚರ್ಮ, ಮುಖ ಸುಕ್ಕುಗಟ್ಟುವುದನ್ನು ತಡೆದು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಸಹಕಾರಿ.

ಫಲವತ್ತತೆಯನ್ನು ಹೆಚ್ಚಿಸುತ್ತದೆ

ನೈಸರ್ಗಿಕವಾಗಿ ನಿಮ್ಮ ಫಲವತ್ತತೆಯನ್ನು ಹೆಚ್ಚಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಪ್ರತಿದಿನ ಈರುಳ್ಳಿಯನ್ನು ತಿನ್ನುವುದು. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವೀರ್ಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈರುಳ್ಳಿ ತಿನ್ನುವ ಮೂಲಕ ಲೈಂಗಿಕ ಉತ್ತೇಜನಕ್ಕೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ

ಈರುಳ್ಳಿಯಲ್ಲಿ ಸೆಲೆನಿಯಮ್ ಎಂಬ ಅಂಶವು ಯಥೇಚ್ಛವಾಗಿ ಕಂಡು ಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅತಿಯಾದ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡಲು ಮತ್ತು ಆಕ್ಸಿಡೀಕರಣ, ಪ್ರೋಟೀನ್ ಸಂಶ್ಲೇಷಣೆ ಮತ್ತು ಕ್ಯಾಲ್ಸಿಯಂ ವರ್ಗಾವಣೆಯಿಂದ ಪ್ರತಿರಕ್ಷಣಾ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಮನಸ್ಥಿತಿಯನ್ನು ಉತ್ತಮವಾಗಿಸುತ್ತದೆ

ಆಧುನಿಕ ಜೀವನ ಶೈಲಿಯಿಂದಾಗಿ ಮನಸ್ಥಿತಿ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತದೆ. ಮತ್ತೆ ಇನ್ನು ಕೆಲವರು ಅಧಿಕ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುವುದೂ ಉಂಟು. ಇಂತಹವರು ಈರುಳ್ಳಿ ತಿನ್ನುವುದು ಉತ್ತಮ. ಏಕೆಂದರೆ ಈರುಳ್ಳಿ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮೆದುಳಿನ ಕಾರ್ಯ ಮತ್ತು ಸಿರೊಟೋನಿನ್ ಉತ್ಪಾದನೆಯನ್ನು ದುರ್ಬಲಗೊಳಿಸುವುದರಿಂದ ಮನಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ .

 

ಫ್ರೆಶ್ ನ್ಯೂಸ್

Latest Posts

Featured Videos