ಈರುಳ್ಳಿ ರೇಟ್ ಇನ್ನು ಕೆಲವೇ ದಿನಗಳಲ್ಲಿ ನೂರರ ಗಡಿ ದಾಟುತ್ತೆ..!

ಈರುಳ್ಳಿ ರೇಟ್ ಇನ್ನು ಕೆಲವೇ ದಿನಗಳಲ್ಲಿ ನೂರರ ಗಡಿ ದಾಟುತ್ತೆ..!

ಬೆಂಗಳೂರು: ನಾವು ದಿನನಿತ್ಯ ಬಳಸುವಂತಹ ಪದಾರ್ಥ ಗಳಲ್ಲಿ ಈರುಳ್ಳಿ ಸಹ ಒಂದು ರಾಜ್ಯದಲ್ಲಿ ಅಂದುಕೊಂದಷ್ಟು ಮಳೆಯಾಗಿಲ್ಲಾ ಇದರಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.

ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ನಗರದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಕೆಜಿಗೆ ₹60 – 65 ವರೆಗೂ ಮಾರಾಟವಾಗುತ್ತಿದೆ. ಶೀಘ್ರವೇ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಕರು ವ್ಯಕ್ತಪಡಿಸುತ್ತಿದ್ದಾರೆ.

ಅನಾವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದು, ಪಕ್ಕದ ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದಲೂ ಈ ವೇಳೆಗೆ ಈರುಳ್ಳಿ ಪೂರೈಕೆ ಆಗದಿರುವುದ ರಿಂದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗೆಯೇ ಮುಂದು ವರಿದರೆ ಶೀಘ್ರವೇ 280- 2100 ತಲುಪಬಹುದು ಎಂದು ವರ್ತಕರು ಹೇಳಿದ್ದಾರೆ.

ಸರ್ಕಾರ ನಾಫೆಡ್ ಮೂಲಕ ಹೆಚ್ಚಿನ ಈರುಳ್ಳಿ ಪೂರೈಕೆ ಮಾಡಲು ಆರಂಭಿಸಿದರೆ ಮಾತ್ರ ದರ ನಿಯಂತ್ರಣಕ್ಕೆ ಬರಬಹುದು. ಇಲ್ಲದಿದ್ದರೆ ಮತ್ತಷ್ಟು ಏರುವುದು ಖಚಿತ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos