1 ವರ್ಷ ಮಗುವನ್ನು ಕೊಂದ 8 ವರ್ಷದ ಬಾಲಕ

1 ವರ್ಷ ಮಗುವನ್ನು ಕೊಂದ 8 ವರ್ಷದ ಬಾಲಕ

ನವದೆಹಲಿ, ಏ. 30, ನ್ಯೂಸ್ ಎಕ್ಸ್ ಪ್ರೆಸ್:  ತನ್ನ ತಮ್ಮನಿಗೆ ಹೊಡೆದ ಹುಡುಗಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ತಂಗಿಯನ್ನೇ 8 ವರ್ಷ ವಯಸ್ಸಿನ ಹುಡೂಗನೊಬ್ಬ ಕೊಂದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆಟವಾಡುತ್ತಿದ್ದ ಸಮಯದಲ್ಲಿ ಬಾಲಕಿಯೊಬ್ಬಳು ತನಗಿಂತ ಕಿರಿಯ ವಯಸ್ಸಿನ ಮಗುವಿಗೆ ಹೊಡೆದಿದ್ದಳು. ಇದರಿಂದ ಕೋಪಗೊಂಡ ಆ ಮಗುವಿನ 8 ವರ್ಷದ ಅಣ್ಣ ಬಾಲಕಿಯ ಮನೆಗೆ ತೆರಳಿ, ಅಲ್ಲಿ ಆಟವಾಡುತ್ತಿದ್ದ ಆಕೆಯ 1 ವರ್ಷ ವಯಸ್ಸಿನ ಪುಟ್ಟ ತಂಗಿಯನ್ನು ಅಪಹರಿಸಿದ್ದಾನೆ.

ಮಗು ನಾಪತ್ತೆಯಾಗಿರುವ ಕುರಿತು ತಂದೆ-ತಾಯಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರಿಗೆ, ಚರಂಡಿಯಲ್ಲಿ ಮಗುವಿನ ಶವ ಸಿಕ್ಕಿದೆ. ಅದೇ ಸಮಯದಲ್ಲಿ ಪಕ್ಕದ ಮನೆಯ ಬಾಲಕನೂ ನಾಪತ್ತೆಯಾಗಿದ್ದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಪತ್ತೆಹಚ್ಚಿ, ವಿಚಾರಣೆ ನಡೆಸಿದಾಗ ಆ ಮಗುವನ್ನು ತಾನೇ ಕೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos