ಒನ್ ರೂಪೀ ಕ್ಲಿನಿಕ್ ನಲ್ಲಿ ಗಂಡು ಮಗುವಿನ ಜನ್ಮ

ಒನ್ ರೂಪೀ ಕ್ಲಿನಿಕ್ ನಲ್ಲಿ ಗಂಡು ಮಗುವಿನ ಜನ್ಮ

ಥಾಣೆ, ಅ. 10 : ಹೆರಿಗೆ ಈಗ ದುಬಾರಿ ವೆಚ್ಚವಾಗುತ್ತಿರುವ ಹಿನ್ನಲೆ ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿ ಒನ್ ರೂ ಕ್ಲಿನಿಕ್ ಇಲ್ಲಿನ ಜನರಿಗೆ ಉಪಯೋಗವಾಗುತ್ತಿದೆ. ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿರುವ ಒನ್ ರೂಪೀ ಕ್ಲಿನಿಕ್ನಲ್ಲಿ ಮಹಿಳೆಯೊಬ್ಬಳು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ರಾಯಗಢ ಜಿಲ್ಲೆಯ ಬಳಿ ಇರುವ ಕರ್ಜತ್ನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿದ್ದ ಕ್ಲಿನಿಕ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕ್ಲಿನಿಕ್ ತೆಗೆದುಕೊಂಡ ಶುಲ್ಕ ಕೇವಲ ಒಂದು ರೂಪಾಯಿ..! 29 ವರ್ಷದ ಸುಭಂತಿ ಪಾತ್ರಾ ಎಂಬ ಮಹಿಳೆ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos