29-02-2019 ನಂದಿನಿ ಮೊಸರು ಪಾಕೀಟಿನ ಮೇಲೆ

29-02-2019 ನಂದಿನಿ ಮೊಸರು ಪಾಕೀಟಿನ ಮೇಲೆ

ಮಾ,1.ನ್ಯೂಸ್ ಎಕ್ಸ್ ಪ್ರೆಸ್, ಬೆಂಗಳೂರು: ನಂದಿನಿಯ ಹಾಲು,ಮೊಸರು, ತುಪ್ಪ ಎಲ್ಲಾ ತಾಜಾ ದೊರೆಯುತ್ತದೆ ಎಂದು ಫಲಕ ಹಾಕಿದರಷ್ಟೇ ಸಾಕಾಗಲ್ಲ ಅದರಂತೆ ನಡೆದುಕೊಳ್ಳಬೇಕು.

2019ರಲ್ಲಿ ಇಲ್ಲದ ದಿನಾಂಕವನ್ನು ಮೊಸರಿನ ಪ್ಯಾಕೇಟಿನ ಮೇಲೆ ನಮೂದಿಸಿ ಹಾಸ್ಯಕ್ಕೆ ಗುರಿಯಾಗಿದೆ. ಫೆಬ್ರವರಿ 29ನ್ನು ನಂದಿನಿಯ ಸಂ‍‍‍ಸ‍್ಥೆ ಸೃಷ್ಟಿಸಿದೆ. 4 ವರ್ಷಕ್ಕೊಮ್ಮೆ ಫೆ. 29 ಬರುತ್ತದೆ ಎಂದೂ ಎಲ್ಲರಿಗೂ ಗೊತ್ತಿದೆ ಆದರೆ ಅದಕ್ಕೂ ಮೊದಲೇ ನಂದಿನಿ ಸಂ‍‍‍‍ಸ‍್ಥೆಯೇ ಫೆ.29ನ್ನು ಬರಮಾಡಿಕೊಂಡಿದೆ.

ಅವಧಿ ಮುಗಿದ ನಂದಿನಿ ಹಾಲು, ಮೊಸರು ಮಾರಾಟ ಮಾಡಿದ್ದನ್ನು ನೋಡಿದ್ದೇವೆ, ಕೆಲವೊಮ್ಮೆ ಪ್ಯಾಕೇಟ್ ಮೇಲೆ ದಿನಾಂಕ ನಮೂದು ಮಾಡದೇ ಇರುವುದನ್ನು ಸಹ ನೋಡಿದ್ದೇವೆ, ನಾಳೆಯ ದಿನಾಂಕವನ್ನು ಇಂದೆ ನಮೂದಿಸಿರುವುದನ್ನೂ ನೋಡಿದ್ದೇವೆ.

ಆದರೆ ಇದೇ ಮೊದಲ ಬಾರಿಗೆ 2019ರಲ್ಲಿ ಇಲ್ಲದ ದಿನಾಂಕವನ್ನು ಮುದ್ರಿಸಿ ಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.ನಿತ್ಯದಂತೆ ಮೊಸರನ್ನು ಕೊಳ್ಳಲು ಹೋದ ಗ್ರಾಹಕರಿಗೆ ಕಾಣಿಸಿದ ಅಚ್ಚರಿಯಿದು. ಮೊಸರನ್ನು ಕೊಂಡು ಮನೆಗೆ ಬಂದು ನೋಡುವಾಗ ಫೆ.29 ಎಂದು ಮುದ್ರಿಸಿರುವುದು ಕಂಡು ಬಂದಿದೆ.

ಸಂಸ್ಥೆಯ ಈ ಬೇಜವಾಬ್ದಾರಿ ತನಕ್ಕೆ ಸಾಕಷ್ಟು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಿನ್ನುವ ಆಹಾರ ಯಾವಾಗಲೂ ಶುದ್ಧವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಇಂತಹ ಘಟನೆಗಳು ನಡೆದಾಗ ಮೊಸರು ಅಥವಾ ಹಾಲು ಯಾವತ್ತು ಪ್ಯಾಕ್ ಆಗಿದ್ದು ಎನ್ನುವುದರ ಸಂದೇಹ ಬರುತ್ತದೆ. ಕೇವಲ ಒಂದು ನಂದಿನಿ ಮಳಿಗೆಯಲ್ಲಿ ಈ ರೀತಿಯ ತೊಂದರೆಯಾಗಿದೆಯೇ ಅಥವಾ ಎಲ್ಲಾ ನಂದಿನಿ ಮೊಸರಿನ ಪ್ಯಾಕ್ ಮೇಲೂ ಕೂಡ ಇದೇ ದಿನಾಂಕ ಮುದ್ರಿತವಾಗಿದೆಯೇ ಎನ್ನುವುದು ಬೆಳಕಿಗೆ ಬರಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos