ಒಟಿಟಿಗೆ ಬಂತು ‘ಯುವ’ ಸಿನಿಮಾ

ಒಟಿಟಿಗೆ ಬಂತು ‘ಯುವ’ ಸಿನಿಮಾ

ಬೆಂಗಳೂರು: ಇತ್ತೀಚೆಗೆ ರಿಲೀಸ್ ಆದ ‘ಯುವ’ಸಿನಿಮಾ ಹಿಟ್ ಆಗಿದೆ. ಸಂತೋಷ್ ಆನಂದ್​ರಾಮ್ ನಿರ್ದೇಶನದ, ಯುವ ರಾಜ್​ಕುಮಾರ್ ನಟನೆಯ ಈ ಚಿತ್ರವನ್ನು ಜನರು ಥಿಯೇಟರ್​ನಲ್ಲಿ ಮೆಚ್ಚಿಕೊಂಡರು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ.

ಯುವ ರಾಜ್​ಕುಮಾರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿರುವ ‘ಯುವ’ಸಿನಿಮಾ ಮಾರ್ಚ್ 29ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಸಿನಿಮಾನ ಜನರು ಮೆಚ್ಚಿಕೊಂಡರು. ಎಲೆಕ್ಷನ್ ಅಬ್ಬರದ ಮಧ್ಯೆಯೂ ಜನರು ಸಿನಿಮಾ ವೀಕ್ಷಿಸಿದರು.

ಸಕಸ್ಸ್​ ಮೀಟ್​ನಲ್ಲಿ ಜನರು ಕೊಟ್ಟ ಪ್ರೀತಿ ಬಗ್ಗೆ ‘ಯುವ’ತಂಡ ಮಾತನಾಡಿತ್ತು. ‘ಎಲೆಕ್ಷನ್ ಅಬ್ಬರದ ಮಧ್ಯೆಯೂ ಜನರು ಸಿನಿಮಾನ ಇಷ್ಟಪಟ್ಟಿದ್ದಾರೆ. ಯುವಗೆ ಪ್ರೀತಿ ತೋರಿಸಿದ್ದಾರೆ’ಎಂದು ತಂಡ ಹೇಳಿತ್ತು. ‘ಯುವ’ಸಿನಿಮಾದಲ್ಲಿ ಯುವ ರಾಜ್​ಕುಮಾರ್ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದರು. ಈಗ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos