ವೃದ್ಧೆ ಪಾರ್ವತಮ್ಮ ಹತ್ಯೆಕೋರ ಬಂಧನ

ವೃದ್ಧೆ ಪಾರ್ವತಮ್ಮ ಹತ್ಯೆಕೋರ ಬಂಧನ

ಬೆಂಗಳೂರು, ಸೆ. 27: ಧನದಾಹಕ್ಕೆ ವೃದ್ದೆಯನ್ನ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ವೃದ್ಧೆ ಪಾರ್ವತಮ್ಮಳ ಬಳಿ ಇದ್ದ ಹಣದೊಚಲು ವೃದ್ಧೆಯ ಸೊಸೆಯ ತಮ್ಮ ಮಹಂತೇಶ್ ಮತ್ತು ಕೆಲ ಕಿಡಿಗೇಡಿಗಳ ಜತೆ ಸೇರಿ ಹತ್ಯೆ ಮಾಡಿದ್ದರು. ಈ ಘಟನೆಯು ಇದೇ ಸೆಪ್ಟಂಬರ್ 18 ರಂದು, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿತ್ತು. ಈ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಪೊಲೀಸರು ಕೊಲೆಗಡುಕರ ಪತ್ತೆಗೆ ಬಲೆ ಬೀಸಿದ್ರು. ಪ್ರಕರಣವನ್ನ ಗಂಭೀರಾವಾಗಿ ತೆಗೆದುಕೊಂಡ ಪೊಲೀಸರು ಇದೀಗಾ ಹತ್ಯೆಯ ಪ್ರಮುಖ

ಆರೋಪಿಯಾದ ಮಹಂತೇಶ್ ಸೇರಿ  ಒಂಬತ್ತು ಜನರನ್ನ ಬಂಧಿಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

ವೃದ್ಧೆ ಪಾರ್ವತಮ್ಮಳ ಮಗ ಮಂಜುನಾಥ್ ಗೆ ತುಮಕೂರಿನ ಯುವತಿ ಜೊತೆ ಮದುವೆ ಮಾಡಲಾಗಿತ್ತು. ಈ ವೇಳೆ ಮಂಜುನಾಥ್ ಪತ್ನಿಯ ಸಹೋದರ ಮಹಂತೇಶ್ ವೃದ್ಧೆಯನ್ನು ಗಮನಿಸಿದ್ದ. ಸ್ವಂತ ಅಕ್ಕನ ಅತ್ತೆಯ ಮನೆಯಲ್ಲಿ ಹಣ ಇರುವುದು ತಿಳಿದ ಮಹಂತೇಶ್. ತನ್ನ ಗೆಳೆಯರ ಜೊತೆಗೂಡಿ ದರೋಡೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಅದೇ ರೀತಿ ದರೋಡೆ ವೇಳೆ ವೃದ್ಧೆಯನ್ನು ಕಟ್ಟಿ ಕೃತ್ಯ ಎಸಗಿದ್ರು. ಈ ವೇಳೆ ಚೀರಿದ ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗಾ ಅಂತಕರನ್ನ ಬಂಧಿಸುವಲ್ಲಿ ಯಶ್ವಿಯಾಗಿರುವ ಕಾಮಾಕ್ಷಿ ಪೊಲೀಸರು ಎಫ್ಐಆರ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos