ಅಧಿಕಾರಿ, ಸಿಬ್ಬಂದಿ ಗೈರು: ಮೇಯರ್ ತರಾಟೆ

 ಅಧಿಕಾರಿ, ಸಿಬ್ಬಂದಿ ಗೈರು: ಮೇಯರ್ ತರಾಟೆ

ಜಯನಗರ, ನ. 18: ನಗರದ ಶಾಪಿಂಗ್ ಕಾಂಪ್ಲೆಕ್ಸ್, ರಾಜಕಾಲುವೆ ವಿಭಾಗ ಮತ್ತು ಇನ್ನಿತರೆ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ಅವರು, ಕಾಂಪ್ಲೆಕ್ಸ್ ಆವರಣದ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಬೇಕು. ಶುಚಿತ್ವ ಕಾಯ್ದುಕೊಳ್ಳದ ವ್ಯಾಪಾರಿಗಳಿಗೆ ದಂಡ ವಿಧಿಸಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಂದಾಯ, ಮಾರುಕಟ್ಟೆ, ಆರೋಗ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾಗ ಬಹುತೇಕ ಸಿಬ್ಬಂದಿ ಸಹಿ ಮಾಡದಿರುವುದು ಕಂಡು ಬಂದಿತು. ಇದರಿಂದ ಕೆಂಡಾಮಂಡಲರಾದ ಮೇಯರ್, ಸಂಬಂಧಪಟ್ಟ ಅಧಿಕಾರಿಗಳ ಬೆವರಿಳಿಸಿದರು. ಗೈರು ಹಾಜರಾಗಿರುವ ಅಧಿಕಾರಿ, ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು.

ಹಾಕದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರೊಂದಿಗೆ ಇತರೆ ಸಿಬ್ಬಂದಿಯೂ ಸಹಿ ಹಾಕಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಮೇಯರ್, ಹಾಜರಾತಿ ಪುಸ್ತಕದಲ್ಲಿಸಹಿ ಹಾಕದವರಿಗೆ ಗೈರು ಹಾಜರಿ ಎಂದು ನಮೂದಿಸುವಂತೆ ವ್ಯವಸ್ಥಾಪಕಿ ದಿವ್ಯಶ್ರೀ ಎಂಬುವರಿಗೆ ಸೂಚನೆ ನೀಡಿದರು. ಅಲ್ಲಿಂದಲೇ ಹಣಕಾಸು ವಿಭಾಗದ ವಿಶೇಷ ಆಯುಕ್ತ ಲೋಕೇಶ್ ಗೆ ಕರೆ ಮಾಡಿ, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದ ಅಧಿಕಾರಿ ಮತ್ತು ಸಿಬ್ಬಂದಿಯ ಒಂದು ವಾರದ ವೇತನ ಕಡಿತಗೊಳಿಸುವಂತೆ ನಿರ್ದೇಶನ ನೀಡಿದರು.

ಅಧಿಕಾರಿ, ಸಿಬ್ಬಂದಿ ಕಚೇರಿ ಬಿಟ್ಟು ಹೊರ ಹೋಗಬೇಕಾದರೆ ಚಲನವಲನ ಪುಸ್ತಕದಲ್ಲಿಯಾವ ಕೆಲಸದ ಮೇಲೆ ತೆರಳುತ್ತಿದ್ದೇವೆ ಎಂಬುದನ್ನು ಬರೆಯಬೇಕು. ಆದರೆ, ಬಹುತೇಕರು ಚಲನವಲನ ಪುಸ್ತಕದಲ್ಲಿ ಸರಿಯಾದ ಮಾಹಿತಿ ದಾಖಲಿಸಿರಲಿಲ್ಲ. ಇದನ್ನು ಕಂಡ ಮೇಯರ್ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಅಕ್ರಮ ಮಳಿಗೆ ತೆರವಿಗೆ ಸೂಚನೆ

ಜಯನಗರ ನೂತನ ಕಾಂಪ್ಲೆಕ್ಸ್ನ ವಾಹನ ನಿಲುಗಡೆ ಜಾಗದಲ್ಲಿಪರವಾನಗಿ ಪಡೆಯದೆಯೇ ತಾತ್ಕಾಲಿಕವಾಗಿ ಮಳಿಗೆಗಳನ್ನು ನಿರ್ಮಿಸಿರುವುದನ್ನು ಗಮನಿಸಿದ ಮೇಯರ್, ಮಳಿಗೆ ನಿರ್ಮಿಸಲು ಅನುಮತಿ ನೀಡಿದವರು ಯಾರು ಎಂದು ಸಂಬAಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಮಳಿಗೆಗಳಿಗೆ ಬೀಗಮುದ್ರೆ ಹಾಕಬೇಕು. ಅನಧಿಕೃತವಾಗಿ ನಿರ್ಮಿಸಿರುವ ಎಲ್ಲಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಭೈರಸಂದ್ರ ವಾರ್ಡ್ ಕಾರ್ಪೊರೇಟರ್ ನಾಗರಾಜ್, ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿದೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಪಾರ್ಕಿಂಗ್ ಜಾಗದಲ್ಲಿತಾತ್ಕಾಲಿಕವಾಗಿ ಮಳಿಗೆಗಳನ್ನು ನಿರ್ಮಿಸಿಕೊಡಲಾಗಿದೆ. ಇಲ್ಲಿರುವ ಮಳಿಗೆಗಳ ತೆರವಿಗೆ ಹೈಕೋರ್ಟ್ ಆದೇಶಿಸಿದೆ. ಶೀಘ್ರದಲ್ಲೇ ಮಳಿಗೆಗಳನ್ನು ತೆರವು ಮಾಡಿ, ವಾಹನ ನಿಲುಗಡೆಗೆ ಅನುವು ಮಾಡಿಕೊಡಲಾಗುವುದು, ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos