ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ತಂಡ

ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ತಂಡ

ಬೆಂಗಳೂರು, ಮೇ.13, ನ್ಯೂಸ್ ಎಕ್ಸ್ ಪ್ರೆಸ್: ಫೋನಿ ಚಂಡಮಾರುತ ಅಪ್ಪಳಿಸಿದ ಪರಿಣಾಮವಾಗಿ ಒಡಿಶಾದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಫೋನಿ ರಿಣಾಮವಾಗಿ ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.

ಚಂಡ ಮಾರುತ ಅಪ್ಪಳಿಸಿ 2 ವಾರವಾಗುತ್ತಿದ್ದರೂ ಕೂಡ ಇದುವರೆಗೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಬೆಂಗಳೂರಿನಿಂದ ಬೆಸ್ಕಾಂ ಸಿಬ್ಬಂದಿ ಒಡಿಶಾಕ್ಕೆ ತೆರಳಿದ್ದಾರೆ.

ಭುವನೇಶ್ವರ ರೈಲಿಗೆ ತೆರಳಲಿದ್ದಾರೆ. ಮೊದಲ ಬ್ಯಾಚಿನಲ್ಲಿ 317 ಸಿಬ್ಬಂದಿ 22 ತಂಡವಾಗಿ ತೆರಳಲಿದ್ದಾರೆ. ಒಡಿಶಾದಲ್ಲಿ 15ದಿನಗಳ ಕಾಲ ಇರಲಿದ್ದಾರೆ. ಒಂದುವೇಳೆ ಅಲ್ಲಿಯವರೆಗೂ ಸಂಪೂರ್ಣ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗದಿದ್ದರೆ ಇನ್ನೂ ಹೆಚ್ಚು ದಿನ ಅಲ್ಲಿಯೇ ಇರಲಿದ್ದಾರೆ.

ತಮಿಳುನಾಡಿನಲ್ಲಿ ಪ್ರವಾಹ ಎದುರಾಗಿದ್ದಗಲೂ ನಮ್ಮ ತಂಡ ಅಲ್ಲಿಗೆ ತೆರಳಿತ್ತು. ಬೆಸ್ಕಾಂ ಸಿಬ್ಬಂದಿಗಾಗಿ ಭುವನೇಶ್ವರಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿಕೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos