‘O2’ ಟ್ರೇಲರ್​ ಬಿಡುಗಡೆ

 ‘O2’ ಟ್ರೇಲರ್​ ಬಿಡುಗಡೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ PRK ಸಂಸ್ಥೆ ಒಳ್ಳೆ ಒಳ್ಳೆ ಸಿನಿಮಾ ಕೊಡ್ತಾ ಬಂದಿದೆ. ಓಟಿಟಿಗೆ ಬರೋ ಕಂಟೆಂಟ್ ಬೇಸ್ ಸಿನಿಮಾ ರೀತಿಯಲ್ಲಿಯೇ PRK ಸಂಸ್ಥೆ ಉತ್ತಮ ಸಿನಿಮಾ ನಿರ್ಮಿಸುತ್ತಿದೆ. ಇಲ್ಲಿವರೆಗೂ 9 ಸಿನಿಮಾಗಳನ್ನ ನಿರ್ಮಿಸಿದೆ. ಇದೀಗ 10ನೇ ಸಿನಿಮಾ ವಿಶೇಷವಾಗಿದೆ.

ಪ್ರತಿಷ್ಠಿತ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆಯ ಮೂಲಕ ಮೂಡಿಬಂದಿರುವ ‘O2’ ಸಿನಿಮಾ  ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಸಿನಿಮಾ ಏಪ್ರಿಲ್ 19ರಂದು ತೆರೆ ಕಾಣಲಿದೆ. ವಿಶೇಷ ಏನೆಂದರೆ, ಇದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್ ಕಹಾನಿ ಹೊಂದಿರುವ ಸಿನಿಮಾ.

ಕನ್ನಡದಲ್ಲಿ ಈ ಪ್ರಕಾರದ ಸಿನಿಮಾಗಳು ವಿರಳ. ಈ ಸಿನಿಮಾದ ಕಥೆಯಲ್ಲಿ ಬರೀ ಥ್ರಿಲ್ಲರ್ ಅಂಶಗಳು ಮಾತ್ರವಲ್ಲದೇ ಪ್ರೀತಿ-ಪ್ರೇಮದ ಎಳೆ ಕೂಡ ಇರಲಿದೆ. ಹಾಗಾಗಿ ‘O2’ ಸಿನಿಮಾವನ್ನು ಲವ್ ಥ್ರಿಲ್ಲರ್ ಸಿನಿಮಾ ಎಂದು ಕರೆಯುತ್ತಿದೆ ಚಿತ್ರತಂಡ.

‘O2’ ಸಿನಿಮಾಗೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ. ಚಿತ್ರವು ನೈತಿಕ ಸಂದಿಗ್ಧತೆಗಳು, ನಿಷೇಧಿತ ಪ್ರಯೋಗಗಳು ಮತ್ತು ಮರಣವನ್ನು ಧಿಕ್ಕರಿಸುವ ಪಟ್ಟುಬಿಡದ ಅನ್ವೇಷಣೆಯನ್ನು ಪರಿಶೀಲಿಸುತ್ತದೆ. ಟೀಸರ್ ಪ್ರೀತಿ, ನೈತಿಕತೆ ಮತ್ತು ಹಣೆಬರಹದ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವ ವೈದ್ಯರ ಅಪಾಯಕಾರಿ ಪ್ರಯಾಣದ ಸುತ್ತ ಕೇಂದ್ರೀಕೃತವಾಗಿದೆ.

ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ಆಶಿಕಾ ರಂಗನಾಥ್, ರಾಘವ್ ನಾಯಕ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್​ ಮುಂತಾದವರು ನಟಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos