7 ನೈಜೇರಿಯಾ ಪ್ರಜೆಗಳ ಬಂಧನ

7 ನೈಜೇರಿಯಾ ಪ್ರಜೆಗಳ ಬಂಧನ

ಬೆಂಗಳೂರು, ಅ. 21 : ವೀಸಾ ಪಾಸ್ ಪೋರ್ಟ್ ಇಲ್ಲದ 7 ನೈಜೇರಿಯಾ ಪ್ರಜೆಗಳ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 7 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಹಿನ್ನಲೆ ಸಿಸಿಬಿ ಪೋಲೀಸರು ಕಳೆದ ತಿಂಗಳು ಮಾದಕ ವಸ್ತು ಸಾಗಾಣಿಕೆದಾರರ ಮೇಲೆ ದಾಳಿ ನಡೆಸಿದ್ದರು. ಇಂದು ಬೆಳಗ್ಗೆ ಸಿಸಿಬಿ ತಂಡ ದಾಳಿ ನಡೆಸಿ ಪರಿಶೀಲಿಸಿದಾಗ 7 ಮಂದಿ ನೈಜೀರಿಯಾ ಪ್ರಜೆಗಳು ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೆ ಬೆಂಗಳೂರಿಗೆ ಬಂದಿರುವ ಮಾಹಿತಿ ಪತ್ತೆಯಾಗಿದೆ. ವಿದೇಶಿಗರ ಕಾಯ್ದೆ ಆಧರಿಸಿ ಪ್ರಕರಣ ದಾಖಲಾಗಿದ್ದು, ತಪಾಸಣೆ ಮುಂದುವರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos