ಮಕ್ಕಳ ಬೆಳವಣಿಗೆ ಪೌಷ್ಟಿಕ ಆಹಾರ ಮುಖ್ಯ

ಮಕ್ಕಳ ಬೆಳವಣಿಗೆ ಪೌಷ್ಟಿಕ ಆಹಾರ ಮುಖ್ಯ

ಮಹದೇವಪುರ, ಫೆ. 05: ಹಣ್ಣು ಹಾಗೂ ತರಕಾರಿಯನ್ನು ಮಕ್ಕಳು ತಿನ್ನುವಂತೆ ಮಾಡಲು ಪೋಷಕರು ಹೊಸ ವಿಧಾನಗಳನ್ನು ಬಳಸಬೇಕು ಎಂದು ರೈನ್ ಬೋ ಮಕ್ಕಳ ಆಸ್ಪತ್ರೆಯ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಹಾಗೂ ಕ್ಲಸ್ಟರ್ ಹೆಡ್ ಡಾ. ನೀರಜ್ ಲಾಲ್ ತಿಳಿಸಿದರು.

ಮಾರತಹಳ್ಳಿ ಸಮೀಪದ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ಪೌಷ್ಠಿಕ ಆಹಾರ ಸೇವಿಸು ಬಗ್ಗೆ ಅರಿವಿನ ಕಾರ್ಯಕ್ರಮದಲ್ಲಿ ಊಟದ ತಟ್ಟೆಯಲ್ಲಿ ಏನಿದೆ” ಎನ್ನುವ ವಿಭಿನ್ನವಾದ ಪೋಸ್ಟರ್ ಒಂದನ್ನು ಮಿಸೆಸ್ ಇಂಡಿಯಾ ಶ್ರುತಿ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಡಾ.ನೀರಜ್ ಲಾಲ್ ಸ್ಕೂಲ್ ಗೆ ಕಳಿಸಿ ಕೊಡುವ ಡಬ್ಬಿಯಲ್ಲಿ ಹಣ್ಣು ಮತ್ತಯ ತರಕಾರಿಗಳಿಗೂ ಆದ್ಯತೆ ನೀಡಬಹುದು, ಪ್ರತಿನಿತ್ಯ ತಿನ್ನುವ ಆಹಾರದಲ್ಲಿ ಪೌಷ್ಠಿಕಾಂಶ ಇರುವುದು ಎಷ್ಟು ಅಗತ್ಯವಿದೆ ಎಂಬುದನ್ನು ಹೇಳಿದರು.

ಮಕ್ಕಳು ತಿನ್ನುವುದರ ಜೊತೆಗೆ ಆಟ ಆಡುವುದು ಕೂಡ ತುಂಬಾ ಮುಖ್ಯ, ಓಡುವುದು, ನಡೆಯುವುದು, ಹಾರುವುದು, ಸೈಕಲ್, ಈಜು, ಸ್ಕೇಟಿಂಗ್ ರೀತಿ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಸದೃಡ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಅವರು ಕಿವಿಮಾತು ಹೇಳಿದರು.

ಪ್ರತಿದಿನ ತಿನ್ನುವ ಆಹಾರದ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಆಯೋಜಿಸಿದ್ದ ವಸ್ತು ಪ್ರದರ್ಶನ ಮಕ್ಕಳನ್ನು ಸೆಳೆಯಿತು.

ಕಾರ್ಯಕ್ರಮದಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ದೀಪ್ತಿ ಅಶೋಕ್, ಪ್ರಥಮ್ ಇಂಟನ್ರ್ಯಾಷನಲ್ ಸ್ಕೂಲ್ನ ನಿರ್ದೇಶಕಿ ಜಯದೇವಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos