ಪಾಲಕ್ ಸೊಪ್ಪಿನಿಂದ ಹಲವಾರು ಲಾಭ

ಪಾಲಕ್ ಸೊಪ್ಪಿನಿಂದ ಹಲವಾರು ಲಾಭ

ಬೆಂಗಳೂರು, ಡಿ. 21: ಸಾಮಾನ್ಯವಾಗಿ ನಾವೆಲ್ಲರು ಪಾಲಕ್ ಸೊಪ್ಪನ್ನು ಸೇವಿಸುತ್ತೇವೆ.  ಪಾಲಕ್ ಸೊಪ್ಪಿನಿಂದ ತಯಾರಿಸಿದ ಸಾರು, ಪಲ್ಯ, ಚಪಾತಿ ಸೇವಿಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಇದರ ಸೇವನೆಯಿಂದ ರಕ್ತದೊತ್ತಡ, ದೇಹದ ಕೊಲೆಸ್ಟ್ರಾಲ್, ಮುಖದ ಸುಕ್ಕು ತಡೆಗಟ್ಟುತ್ತದೆ.

ಕಣ್ಣುಗಳ ದೃಷ್ಠಿ ದೋಷಕ್ಕೆ ಹಾಗೂ ನರಗಳ ವೀಕ್ ನೆಸ್ ನಿವಾರಣೆಮಾಡುತ್ತದೆ. ಜ್ಞಾಪಕ ಶಕ್ತಿ ವೃದ್ದಿ, ಕೀಲುನೋವು ಕಡಿಮೆ ಮಾಡಿ ರಕ್ತ ವೃದ್ಧಿಸುವಲ್ಲಿ, ಚರ್ಮ ಬಿಗಿಯಾಗಿಡುವಲ್ಲಿ ಇದು ಸಹಕಾರಿಯಾಗಿದೆ. ಇದರಲ್ಲಿ ಎ ಜೀವಸತ್ವ ಇರುವುದರಿಂದ ಆಹಾರದಲ್ಲಿ ಬಳಸಬಹುದು.

ಅಲ್ಲದೆ ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ. ಪಾಲಕ್ ಸೊಪ್ಪು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ. ಅತಿನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗ ಬರುವಂತೆ ಮಾಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos