ಮಾದರಿ ಗ್ರಾಪಂಗಳನ್ನಾಗಿಸಲು ಸೂಚನೆ

ಮಾದರಿ ಗ್ರಾಪಂಗಳನ್ನಾಗಿಸಲು ಸೂಚನೆ

ಬಾಗೇಪಲ್ಲಿ: ನರೇಗಾದಡಿ ಕೂಲಿ ಕೆಲಸ ಸಮರ್ಪಕವಾಗಿ ಮಾಡಿ, ಕಾಮಗಾರಿಯಲ್ಲಿ ಶೇ ೧೦೦ ರಷ್ಟು ಪ್ರಗತಿ ಸಾಧಿಸಬೇಕು. ಗ್ರಂಥಾಲಯದಲ್ಲಿ ದಿನಪತ್ರಿಕೆ, ಪರೀಕ್ಷಾ ಪುಸ್ತಕಗಳನ್ನಿಟ್ಟು ಮಾದರಿ ಗ್ರಾಪಂಗಳನ್ನಾಗಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರುನ್ನುಮ್ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹನಾಧಿಕಾರಿ ಫೌಜಿಯಾ ತರುನ್ನುಮ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿಗಳಲ್ಲಿ ಪ್ರಗತಿ ಕಡಿಮೆ ಇದೆ. ಗ್ರಾಮಗಳಲ್ಲಿ ಬಹುತೇಕ ರೈತರು ಇದ್ದಾರೆ. ಕೂಲಿಕೆಲಸ ಕೇಳಿದವರಿಗೆ ಕೂಲಿ ಕೆಲಸ ನೀಡುವುದು ಪಂಚಾಯಿತಿ ಅಧಿಕಾರಿಗಳ ಜವಾಬ್ದಾರಿ ಆಗಿದೆ. ಅರ್ಜಿ ೬ ರನ್ನು ತುಂಬಿಸಿ ಕೂಲಿಕೆಲಸ ನೀಡಬೇಕು. ಕೂಲಿ ಹಣವನ್ನು ಪಾವತಿಸಲು ಅಧಿಕಾರಿಗಳು ವಿಳಂಬ ಮಾಡದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಬಾಕಿ ಇರುವ ಸಾಮಾಗ್ರಿಗಳ ಹಣವನ್ನು ಪಾವತಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಸೂಚಿಸಿದರು.

ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ, ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದರಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮಾಡಲಾಗಿದೆ. ಎಲ್ಲಾ ಪಂಚಾಯಿತಿಯಲ್ಲಿಯೂ ಮಾದರಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಅಧಿಕಾರಿಗಳು ಮಾಡಬೇಕು. ನರೇಗಾ ಯೋಜನೆಯಡಿಯಲ್ಲಿ ಶಾಲಾ, ಅಂಗನವಾಡಿ ಕಾಂಪೌಂಡು, ಇಂಗುಗುಂಡಿ, ಶುದ್ಧ ನೀರು ಸರಬರಾಜು, ಮಳೆ ಕೊಯ್ಲು, ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಆಕರ್ಷಕ ಬಣ್ಣಗಳನ್ನು ಮಾಡಿಸಬೇಕು. ಮುಂದಿನ ಡಿಸೆಂಬರ್ ಒಳಗೆ ಮಾದರಿ ಕೇಂದ್ರಗಳನ್ನು ಮಾಡಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos