ಬೆಂಗಳೂರು: ಬೆಂಗಳೂರು ಸೆಂಟ್ರಲ್ ನಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾಲ್ಕನೇ ಬಾರಿಗೆ ಪಿಸಿ ಮೋಹನ್ ಸ್ಪರ್ಧಿಸಿದ್ದು, ಈ ಬಾರಿ ಕೂಡ ಗೆಲುವಿನ ದಡ ದಾಟಲಿದ್ದಾರೆಯೇ ಎಂಬುದು ಕುತೂಹಲದ ಪ್ರಶ್ನೆ. ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ನೀಡಲು ಮುಂದಾಗಿದೆ.
ಜನತಾ ಪಾರ್ಟಿ ಅಭ್ಯರ್ಥಿಯಾಗಿ ಶ್ರೀ ಪಿ.ಸಿ ಮೋಹನ್ ರವರು ಇಂದು ಪಾಲಿಕೆ ಕೆಂದ್ರ ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರ್ಯಾಲಿ ನಡೆಸಿ, ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದರು.
ಇನ್ನೂ ಪಿ.ಸಿ.ಮೋಹನ್ ನಾಮಿನೇಷನ್‌ಗೆ ಕೇಸರಿ ದೊಡ್ಡ ಪಡೆ ಸಾಥ್ ನೀಡಿದ್ದು, ರ್ಯಾಲಿ ಉದ್ದಕ್ಕೂ ಮೋದಿ ಮತ್ತೊಮ್ಮೆ ಎಂಬ ಕೂಗು ಕೇಳಿತು.
ಈ ಸಂದರ್ಭದಲ್ಲಿ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಶಾಸಕ ಸುರೇಶ್ ಕುಮಾರ್, ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಸಿ ಟಿ ರವಿ, ಅರವಿಂದ್ ಲಿಂಬಾವಳಿ, ತಾರಾ ಅನುರಾಧಾ, ಶೃತಿ, ಜೆಡಿಎಸ್ ಮುಖಂಡ ರಮೇಶ್ ಗೌಡ, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.