ನೆಬ್ಬೂರು ನಾರಾಯಣ ಭಾಗವತ ನಿಧನ

ನೆಬ್ಬೂರು ನಾರಾಯಣ ಭಾಗವತ ನಿಧನ

ಶಿರಸಿ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: 83 ವರ್ಷ ವಯಸ್ಸಿನ ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತ ನೆಬ್ಬೂರು ನಾರಾಯಣ ಭಾಗವತ ಅವರು ಇಂದು ಬೆಳಗ್ಗೆ ಇಧನರಾಗಿದ್ದಾರೆ.  ನೆಬ್ಬೂರು ಶೈಲಿನ ಭಾಗವತರು ಸುಮಾರು 4 ದಶಕಗಳ ಕಾಲ ತಮ್ಮ ಕಂಚಿನ ಕಂಠದಿಂದ ಯಕ್ಷಗಾನ ರಂಗದಲ್ಲಿ ಪ್ರಸಿದ್ಧರಾದವರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿ ಕೆರೆಮನೆ ಮೇಳಗಳಲ್ಲಿ 3 ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ನೆಬ್ಬೂರು ಭಾಗವತರದ್ದು.

ದೇಶದ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ವರಮಾಧುರ್ಯ ಪಸರಿಸಿದ ಖ್ಯಾತಿ ನೆಬ್ಬೂರರದ್ದು.

ಫ್ರೆಶ್ ನ್ಯೂಸ್

Latest Posts

Featured Videos