ನೀವು ಸೇನೆಗೆ ಸೇರಬೇಕಾ ?

ನೀವು ಸೇನೆಗೆ ಸೇರಬೇಕಾ ?

ನವದೆಹಲಿ, ಆ. 13 : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆ ಸೇನೆಯ ಸಮವಸ್ತ್ರ ಧರಿಸಬಹುದು. ಅವ್ರ ರಂತೆ ಕೆಲಸ ಮಾಡಬಹುದು. ಸೈನಿಕರ ಜೊತೆ ತರಬೇತಿ ಪಡೆಯಬಹುದು. ಅವ್ರ ಜೊತೆ ಊಟ ಮಾಡಬಹುದು. ಅವ್ರ ಜೊತೆ ಸಂಬಳ ಪಡೆಯಬಹುದು. ಭಾರತೀಯ ಸೇನೆಯ ಪ್ರಾದೇಶಿಕ ಸೈನ್ಯದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಪ್ರತಿಯೊಬ್ಬರೂ ಸೇರಬಹುದು. ಅವ್ರು ಲೆಫ್ಟಿನೆಂಟ್ ಆಗಿ ಸೈನ್ಯ ಸೇರಬಹುದಾಗಿದೆ. ಅದನ್ನು ನೀವು ಸ್ವಯಂಸೇವಕ ಸೇವೆ ಎಂದು ಭಾವಿಸಬಹುದು. ಈ ಸೇನೆಗೆ ಸೇರಲು ಕನಿಷ್ಠ ವಯಸ್ಸು 18 ವರ್ಷ. ಗರಿಷ್ಠ ವಯಸ್ಸು 42 ವರ್ಷ
ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿ ತರಬೇತಿ ಪಡೆಯುತ್ತಿದ್ದಾರೆ. ನೀವು ಕೂಡ ಯಾವುದೇ ಕಠಿಣ ಪರೀಕ್ಷೆಯಿಲ್ಲದೆ ಸೇನೆಯಲ್ಲಿ ಜಾಗ ಪಡೆಯಬಹುದಾಗಿದೆ. ನಮ್ಮ ದೇಶದಲ್ಲಿ ಸುಮಾರು 40 ಸಾವಿರ ಮಂದಿ ಕೆಲಸದಿಂದ ವಿಶ್ರಾಂತಿ ಪಡೆದು ಸೇನೆಗೆ ಸೇರಿಕೊಳ್ಳುತ್ತಾರೆ. ಅದ್ರಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು ಸೇರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos