ನಿವೇಶನ ಮಾರಿಕೊಳ್ಳಬೇಡಿ

ನಿವೇಶನ ಮಾರಿಕೊಳ್ಳಬೇಡಿ

ದೇವನಹಳ್ಳಿ, ಜು.31 : ಅಣ್ಣೇಶ್ವರ ಒಂದೇ ಗ್ರಾಪಂ ವ್ಯಾಪ್ತಿಯಲ್ಲಿ ಬ್ಯಾಂಕಿನಲ್ಲಿರುವ ಹಣ 55 ಕೋಟಿ ರೂ. ಇದೆ. ರಾಜ್ಯದಲ್ಲಿ ಮಾದರಿ ಗ್ರಾಪಂ ಮಾಡಬಹುದು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಬೈಚಾಪುರ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಸರ್ವ ಸದಸ್ಯರು ಸಭೆಯಲ್ಲಿ ನಿರ್ಣಯಿಸಿ ಅಭಿವೃದ್ಧಿ ಕೆಲಸ ಮಾಡಿ, ಗ್ರಾಮೀಣ ಕಸುಬುದಾರರಿಗೆ ಒತ್ತು ನೀಡಿ, ಕುರಿ,ಕೋಳಿ, ಹಂದಿ, ಪಶು ಸಾಕಾಣಿಕೆಗೆ ಅರ್ಹರನ್ನು ಆಯ್ಕೆ ಮಾಡಿ ಗ್ರಾಮದ ಅಭಿವೃದ್ಧಿಯಾಗಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ನಂತರ ಭೂಮಿಯ ಬೆಲೆ ಗಗನಕ್ಕೇರಿದೆ. ಕಡು ಬಡುವರು ಒಂದಿಂಚು ಜಾಗ ಖರೀದಿಸಿ ಸೂರು ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ. ನಿವೇಶನದ ಹಕ್ಕುಪತ್ರ ಪಡೆದಿರುವ ಯಾವುದೇ ಕಾರಣಕ್ಕೆ ಮಾರಾಟ ಮಾಡಿಕೊಳ್ಳಬೇಡಿ. ಅದನ್ನು ಉಳಿಸಿಕೊಂಡು ಹೋಗಬೇಕು. ಅನೇಕ ಜನರಿಗೆ ಹಕ್ಕುಪತ್ರದಿಂದ ಅನುಕೂಲವಾಗುವಂತೆ ಆಗಿದೆ. ಹಲವು ವರ್ಷಗಳಿಂದ ನಿವೇಶನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದವರಿಗೆ ಹಕ್ಕುಪತ್ರವನ್ನು ವಿತರಿಸಲಾಗುತ್ತಿದೆ. ದೇವನಹಳ್ಳಿ ಮತ್ತು ವಿಜಯಪುರ ಪುರಸಭಾ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ಅನೇಕ ವರ್ಷಗಳಿಂದ ಒಂದೇ ಕಡೆ ವಾಸವಿದ್ದಾರೆ. ಅದಕ್ಕೆ ಗ್ರಾಮೀಣ ಪ್ರದೇಶವೂ ಹೊರತಲ್ಲ, 40 ವರ್ಷಗಳಿಂದ ಸರ್ಕಾರಿ ಜಾಗ, ಖರಾಬು ಜಮೀನುಗಳಲ್ಲಿ ಮಣ್ಣಿನ ಗೋಡೆ, ಗುಡಿಸಲುಗಳಲ್ಲಿ ವಾಸವಿರುವ ಕುಟುಂಬಗಳಿಗೆ ಅನೇಕ ತಾಂತ್ರಿಕ ಕಾರಣಗಳಿಂದ ಹಕ್ಕುಪತ್ರ ನೀಡಿರಲಿಲ್ಲ. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 20 ರಿಂದ 25 ಸಾವಿರ ಅರ್ಹ ಫಲಾನುಭವಿಗಳಿಗೆ ನಿವೇಶನದ ಅಗತ್ಯತೆ ಇದ್ದಿದ್ದರಿಂದ ಹಕ್ಕುಪತ್ರವನ್ನು ನೀಡಲಾಗುತ್ತಿದೆ. ಎಂದು ಹೇಳಿದರು.

ಈ ವೇಳೆಯಲ್ಲಿ ತಹಶೀಲ್ದಾರ್ ಕೇಶವಮೂರ್ತಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಸಿ.ಮುನಿರಾಜು, ಗ್ರಾಪಂ ಸದಸ್ಯ ಸಿ.ಮುನಿರಾಜು, ಪಾರ್ವತಮ್ಮ, ಹಾಪ್ ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಕಸಬಾ ಹೋಬಳಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಯರಪ್ಪನಹಳ್ಳಿ ಮಂಜುನಾಥ್, ರಾಜ್ಯಸ್ವ ನಿರೀಕ್ಷಕ ಚಂದ್ರಶೇಖರ್, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷ ರಾಮಮೂರ್ತಿ, ಮುಖಂಡ ರಮೇಶ್, ಸತ್ಯನಾರಾಯಣ್, ಮುನಿರಾಜು, ಗೋಪಾಲ್, ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos