ನಿತೇಶ್ ಎಸ್ಟೇಟ್ ಕಂಪನಿ ಮೇಲೆ ಸಿಸಿಬಿ ದಾಳಿ

ನಿತೇಶ್ ಎಸ್ಟೇಟ್ ಕಂಪನಿ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಇಂದು ಟ್ರಿನಿಟಿ ಸರ್ಕಲ್​ನಲ್ಲಿರುವ ನಿತೇಶ್ ಎಸ್ಟೇಟ್ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಸಿಸಿಬಿ ವಿಭಾಗದ ಡಿಸಿಪಿ ಗೀರೀಶ್ ನೇತೃತ್ವದಲ್ಲಿ ದಾಳಿ ಮಾಡಿದ 30ಕ್ಕೂ ಹೆಚ್ಚು ಅಧಿಕಾರಿಗಳು, ಹಲವು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಸತತ ಹತ್ತು ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದ ಪೊಲೀಸರು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮುಂಬೈ ಮೂಲದ ವ್ಯಕ್ತಿಗೆ ಸೇರಿದ್ದ ಈ ಕಂಪನಿ, ಸೈಟ್ ಕೊಡ್ತೀವಿ, ಫ್ಲಾಟ್ ಕೊಡ್ತೀವಿ ಅಂತ ನೂರಾರು ಗ್ರಾಹಕರಿಗೆ ಕೋಟಿ ಕೋಟಿ ವಂಚನೆ ಮಾಡುತ್ತಾ ಬಂದಿದೆ ಎನ್ನಲಾಗಿದೆ. ಹೀಗಾಗಿ ವಂಚನೆಗೊಳಗಾದ ನೂರಾರು ಮಂದಿ ಸಿಸಿಬಿಗೆ ತೆರಳಿ ದೂರು ದಾಖಲಿಸಿದ್ದಾರೆ. ಹಲವು ದೂರುಗಳು ದಾಖಲಾದ ಹಿನ್ನೆಲೆ ಇಂದು ಏಕಾಏಕಿ ನಿತೇಶ್ ಎಸ್ಟೇಟ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳ ಏಕಾಏಕಿ ದಾಳಿಯಿಂದಾಗಿ ನಿತೇಶ್ ಎಸ್ಟೇಟ್ ಕಂಪನಿ ಬೆಚ್ಚಿಬಿದ್ದಿದೆ.

ಫ್ರೆಶ್ ನ್ಯೂಸ್

Latest Posts

Featured Videos