ಅಲಿಬಾಗ್:ನೀರವ್ ಮೋದಿ ಐಷಾರಾಮಿ ಬಂಗ್ಲೆ ನೆಲಸಮ

ಅಲಿಬಾಗ್:ನೀರವ್ ಮೋದಿ ಐಷಾರಾಮಿ ಬಂಗ್ಲೆ ನೆಲಸಮ

ಮುಂಬೈ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ 100 ಕೋ.ರೂ.ಗೂ ಅಧಿಕ ವೌಲ್ಯದ ಸಮುದ್ರಕ್ಕೆ ಮುಖ ಮಾಡಿರುವ ಬೃಹತ್ ಬಂಗ್ಲೆಯನ್ನು ಸ್ಪೋಟಕ ಇಟ್ಟು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಭಾರತದ ಬ್ಯಾಂಕ್‌ಗಳಲ್ಲಿ ಸಾಲ ಮರು ಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿರುವ ಕೋಟ್ಯಧಿಪತಿ ನೀರವ್ ಮೋದಿ ಕರಾವಳಿ ನಿಯಂತ್ರಣ ವಲಯ ನಿಯಮಗಳು ಹಾಗೂ ಮಹಾರಾಷ್ಟ್ರದ ರಾಜ್ಯದ ನಿಯಮಾವಳಿಗಳನ್ನು ಉಲ್ಲಂಘಿಸಿ 33,000 ಚದರ ಅಡಿ ಐಷಾರಾಮಿ ಬಂಗ್ಲೆಯನ್ನು ಅನಧಿಕೃತವಾಗಿ ಕಟ್ಟಿದ್ದರು.

ಬಂಗ್ಲೆಯ ಅಡಿಪಾಯ ಗಟ್ಟ್ಟಿಮುಟ್ಟಾಗಿದ್ದ ಕಾರಣ ಬಂಗ್ಲೆ ಒಡೆಯಲು ಬಂದ ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಕಟ್ಟಡವನ್ನು ಕೆಡವಿದ್ದಾರೆ. ಬಂಗ್ಲೆ ಕೆಡೆವಲು ಒಂದು ತಿಂಗಳು ಸಮಯ ಹಿಡಿದಿದೆ. ಕಟ್ಟಡ ಧ್ವಂಸ ಕೆಲಸ ಚುರುಕುಗೊಳಿಸಲು ಡೈನಾಮೈಟ್‌ಗಳಂತಹ ನಿಯಂತ್ರಿತ ಸ್ಫೋಟಕವನ್ನು ಬಳಸಲಾಗಿದೆ. 2009ರಲ್ಲಿ ಶಂಭುರಾಜೆ ಯುವ ಕ್ರಾಂತಿ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ನೀರವ್ ಮೋದಿ ನಿರ್ಮಿಸಿದ್ದ ಅನಧಿಕೃತ ಬಂಗ್ಲೆಯನ್ನು ಕೆಡವು ಹಾಕಲು ಆದೇಶಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos