ನಾಸಾ ಮೂಡಿಸಿದ ಚಿತ್ತಾರ: ಆಗಸದಲ್ಲಿ ಮೂಡಿತು ನೀಲಿ ಮೋಡ!

ನಾಸಾ ಮೂಡಿಸಿದ ಚಿತ್ತಾರ: ಆಗಸದಲ್ಲಿ ಮೂಡಿತು ನೀಲಿ ಮೋಡ!

ನಾರ್ವೆ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ನಾರ್ವೆ ಮತ್ತು ಸ್ವೀಡನ್ ದೇಶದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಮೋಡಗಳು ನೆಟ್ಟಿಗರನ್ನ ಕೆಲಕಾಲ ದಂಗುಬಡಿಸಿತ್ತು. ಕೆಲ ಟ್ವಿಟಿಗರು ಇದೇನಪ್ಪ ಭೂಮಿ ಕಡೆ ಮತ್ತೆ ಏಲಿಯನ್ಸ್ ಅಥವಾ ಯುಎಫ್ಒಗಳು ಬಂದವಾ ಎಂಬ ಸಂಶಯವನ್ನ ಹೊರಹಾಕಿದ್ದರು. ಭಾನುವಾರ ಬೆಳಗಿನ ಜಾವ 12.24 ನಿಂದ 1.30 ರ ವರೆಗೆ ಆಕಾಶದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಮೋಡಗಳನ್ನ ನದರ್ನ್ ಲೈಟ್ಸ್ ಫೋಟೊಗ್ರಾಫಿ ಎಕ್ಸಪರ್ಟ್ ಚಡ್ ಬ್ಲೆಕ್ಲೇ ಫೋಟೊ ತೆಗೆದು ತನ್ನ ಫೇಸ್ ಬುಕ್ ನಲ್ಲಿ ಹಾಲಿಡೇ ಟೂರ್ ಕಂಪನಿ ಎಂಬ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್ತ್ ವೈರಲ್ ಆಗಿದೆ. ಅರೋರ ವೆಬ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನ ಸೆರೆ ಹಿಡಿದ ಬ್ಲೆಕ್ಲೆ ಇದು ನಮ್ಮ ಪ್ರಪಂಚದಿಂದ ಹೊರಗೆ ಇದ್ದರೂ ಈ ಬಣ್ಣ ಕುತೂಹಲ ಕೆರಳಿಸಿದೆ ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ. ಇದು ನಿಜವಾಗಿಯೂ ಏಲಿಯನ್ ಕೃತ್ಯವಾ ಎಂದು ಕೇಳಿದರೆ ನಾಸಾ ಅಲ್ಲವೆಂದು ಉತ್ತರಿಸುತ್ತದೆ. ಏಕೆಂದರೆ ನಾಸಾ ಬಾಹ್ಯಾಕಾಶದಲ್ಲಿ ನಡೆಸುತ್ತಿರುವ ಸಂಶೋಧನೆಯ ಫಲವಾಗಿ ಈ ಬಣ್ಣ ಮೂಡಿದೆ. ನಾರ್ವೆಯ ಅಂಡೋಯಾ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ರಾಕೆಟ್ ಗಳ ಉಡಾವಣೆ ಮಾಡುವಾಗ ಬಿಡುಗಡೆಗೊಂಡ ಮೆಟಾಲಿಕ್ ಪೌಡರ್ ನಿಂದಾಗಿ ನೀಲಿ ಬಣ್ಣ ಮೂಡಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos