ನಿಖಿಲ್ ‘ಶೂ’ಗೆ ನಟಿ ಫಿದಾ?

ಬೆಂಗಳೂರು. ಜ. 12 : ಫೋಟೋದಲ್ಲಿರುವ ನಿಖಿಲ್ ಕುಮಾರಸ್ವಾಮಿ ಹಾಕ್ಕೊಂಡಿರುವ ಶೂ ಮೇಲೆ ಟಾಲಿವುಡ್ ನಟಿ ಮಂಚು ಲಕ್ಷ್ಮಿಗೆ ಲವ್ವಾಗಿದೆ. ತೆಲುಗಿನ ಖ್ಯಾತ ನಟ ಮೋಹನ್ ಬಾಬು ಮುದ್ದಿನ ಮಗಳು ಮಂಚು ಲಕ್ಷ್ಮೀ ಆಗಿದ್ದು, ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಅಲ್ಲದೇ, ಕಿರುತೆರೆ ನಿರೂಪಕಿಯಾಗಿಯೂ ಸೈ ಅನ್ನಿಸಿಕೊಂಡಿದ್ದಾರೆ ಇವರು.

ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಯಾಗುತ್ತಾರೆ. ಇದೇ ಲಕ್ಷ್ಮೀ, ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ಗೋಡೆಗೆ ಒರಗಿ ಫೋಸ್ ಕೊಟ್ಟಿರುವ ಫೋಟೋವನ್ನ ಇತ್ತೀಚೆಗೆ ತಮ್ಮ ಇನ್ಸ್ಟ್ರಾಮ್ನಲ್ಲಿ ಪೋಸ್ಟ್ ಮಾಡಿದ್ರು. ಅದರಲ್ಲಿ ಅವರು ಹಾಕ್ಕೊಂಡಿದ್ದ ವೈಟ್ ಅಂಡ್ ಗೋಲ್ಡ್ ಕಲರ್ ಶೂ ಹೈಲೆಟ್ ಆಗಿದೆ. ಆ ಪೋಸ್ಟ್ ನೋಡಿ ‘ನನಗೆ ಆ ಶೂ ಬೇಕು’ ಅಂತ ಕಾಮೆಂಟ್ ಬಾಕ್ಸ್ನಲ್ಲಿ ಲಕ್ಷ್ಮೀ ಮಂಚು ಕಾಮೆಂಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos