ನಿಖಿಲ್ ಸೋತರೂ ಸಚಿವ ಸ್ಥಾನ ನೀಡಬೇಕಂತೆ.!

ನಿಖಿಲ್ ಸೋತರೂ ಸಚಿವ ಸ್ಥಾನ ನೀಡಬೇಕಂತೆ.!

ಮಂಡ್ಯ, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಬಾರಿ ಕುತುಹಲ ಕೆರಳಿಸಿದ್ದ ಕ್ಷೇತ್ರವೆಂದರೆ ಅದು ಮಂಡ್ಯ, ಹೌದು, ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್ ಗೆ ವ್ಯತಿರಿಕ್ತವಾಗಿ ಬಂದರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಮಂಡ್ಯ ಕಾಂಗ್ರೆಸ್‍ ನ ಸ್ಥಳೀಯ ನಾಯಕರು ಲೋಕಸಭಾ ಚುನಾವಣೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ನಿಖಿಲ್‍ ಗೆ ಹಿನ್ನೆಡೆಯಾದರೆ, ಅವರನ್ನು ವಿಧಾನ ಪರಿಷತ್‍ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿಸುವ ಮೂಲಕ ಸಕ್ರಿಯ ರಾಜಕಾರಣದಲ್ಲಿರುವಂತೆ ಮಾಡಬೇಕು ಎಂದು ಮಂಡ್ಯದ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ. ಈ ಚುನಾವಣೆಯಲ್ಲಿ ನಿಖಿಲ್‍ ಗೆ ಹಿನ್ನಡೆಯಾದರು ಅದು ತಾತ್ಕಾಲಿಕ. ಹೀಗಾಗಿ ಅವರು ಮಂಡ್ಯದಲ್ಲಿ ಸಕ್ರಿಯವಾಗಿರಲು ರಾಜಕೀಯ ಸ್ಥಾನಮಾನ ನೀಡಬೇಕು ಎಂಬುದು ಸ್ಥಳೀಯ ಜೆಡಿಎಸ್‍ ನಾಯಕರ ವಾದ.

 

ಫ್ರೆಶ್ ನ್ಯೂಸ್

Latest Posts

Featured Videos