ನಿಜ ನಾಗರ ಹಾವಿಗೆ ಪೂಜೆ

ನಿಜ ನಾಗರ ಹಾವಿಗೆ ಪೂಜೆ

ಶಿರಸಿ, ಆ.6 : ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಹಾವು ಪೂಜೆ ಸಲ್ಲಿಸುವರನ್ನು ಕಾಣಿಸಿಕೊಳ್ಳುತ್ತಾರೆ. ಉರಗ ತಜ್ಞ ಪ್ರಶಾಂತ ಹುಲೇಕಲ್ ಮನೆಯಲ್ಲಿ 2 ನಿಜ ನಾಗರಗಳಿಗೆ ಪೂಜೆ ಸಲ್ಲಿಸಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಾಗರ ಕಲ್ಲುಗಳಿಗೆ ಚಪ್ಪರ ಮಾಡಿ ಹಾಲು, ಹೋಳಿಗೆಯ ನೈವೇದ್ಯ ಸಮರ್ಪಿಸಿದ್ದಾರೆ. ನಗರದ ಜನತೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲಿಯ ನೀಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಉರಗ ತಜ್ಞ ಪ್ರಶಾಂತ ಹುಲೇಕಲ್ ತಮ್ಮ ಮನೆಯಲ್ಲಿ 2 ನಿಜ ನಾಗರಗಳಿಗೆ ಪೂಜೆ ಸಲ್ಲಿಸಿದರು. ಹಾವು ಹಿಡಿಯುವುದನ್ನು ಉದ್ಯೋಗವನ್ನಾಗಿಸಿಕೊಂಡ ಪ್ರಶಾಂತ, ನಾಗರ ಪಂಚಮಿಯಂದು ಹಿಡಿದ ಹಾವನ್ನು ಪೂಜೆ ಸಲ್ಲಿಸಿ ಬಳಿಕ ಕಾಡಿಗೆ ಬಿಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ‘ನನ್ನ ತಂದೆ ಸುರೇಶ 35 ವರ್ಷಗಳ ಕಾಲ ಹಾವು ಹಿಡಿದರು. ಅಲ್ಲದೆ, ಪ್ರತಿ ನಾಗರ ಪಂಚಮಿಯಂದು ಪೂಜೆ ಸಲ್ಲಿಸುತ್ತಿದ್ದರು. ವರ್ಷಕ್ಕೊಮ್ಮೆ ಕೃತಜ್ಞತಾಪೂರ್ವಕವಾಗಿ ಹಾವನ್ನು ಪೂಜೆ ಮಾಡುತ್ತಿದ್ದೇವೆ. ಹಾವಿಗೆ ಹಾಲು ಎರೆಯುವಿಕೆ ಸರಿಯಲ್ಲ.

ಫ್ರೆಶ್ ನ್ಯೂಸ್

Latest Posts

Featured Videos