ಕಳ್ಳರಿಗಾಗಿ ನೈಟ್ ವಾಚ್ ಮೆನ್  ಓಬವ್ವಂದಿರು

ಕಳ್ಳರಿಗಾಗಿ ನೈಟ್ ವಾಚ್ ಮೆನ್  ಓಬವ್ವಂದಿರು

ಬೆಂಗಳೂರು, ಸೆ. 21: ನಗರದಲ್ಲಿ ದಿನೇ ದನೇ ಕಳ್ಳತನ ದರೋಡೆ ಪ್ರಕರಣಗಳು ಎಲ್ಲೆ ಮೀರುತ್ತಿವೆ. ಮಹಿಳೆಯರು  ತಮ್ಮ ವಡವೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ರಕ್ಷಣೆಗಾಗಿ ರಾತ್ರಿಯಿಡಿ ಮಹಿಳೆಯರು ಒನಕೆ ಓಬವ್ವನ ಹಾಗೆ ಕಾವಲು ಕಾಯೋ ಪರಿಸ್ಥಿತಿ ಬಂದೊದಗಿದೆ ನಗರದ ನಿವಾಸಿಗಳಿಗೆ.

ದೊಡ್ಡನೆಕುಂದಿ ಅತ್ಯಂತ ಐಷಾರಾಮಿ ಅಪಾರ್ಟ್ಮೆಂಟ್ ಮೇಲೆ  ಕಳ್ಳರ ಕಣ್ಣು ಬಿದ್ದಿರುವುದೇ ಮಹಿಳೆಯರ ನಿದ್ದೆಗೆ ಭಂಗವುಂಟು ಮಾಡಿದೆ. ರಾತ್ರಿ ವೇಳೆ ಮಹಿಳೆಯರು ಪೆಪ್ಪರ್ ಸ್ಪ್ರೇ ಹಾಕಿ ಸ್ಟಿಕ್ ಹಿಡಿದು ಕಳ್ಳರ ಭೇಟೆಗೆ ಹದ್ದಿನ ಕಣ್ಣಿಟ್ಟು ಕಾಯುವಂತಹ ಪರಿಸ್ಥತಿ ನಿರ್ಮಾಣವಾಗಿದೆ.

ಸೆ.12 ರಿಂದ ಈವರೆಗೆ ಸರಣಿ ಆರು ಕಳವು ಪ್ರಕರಣಗಳು ನಡೆದಿವೆ ಆದರೂ ಒಬ್ಬ ಕಳ್ಳನೂ ಸಿಕ್ಕಿಬಿದ್ದಿಲ್ಲ. ನಗರದ ಹೆಚ್‌ಎಸ್‌ಆರ್‌ಲೇಔಟ್, ಕೋರಮಂಗಲ, ಜೆಪಿನಗರ, ವಿಜಯನಗರ, ಆರ್‌ಟಿನಗರ ಮಲ್ಲೇಶ್ವರಂ ಸೇರಿದಂತೆ ಬಹುತೇಕ ನಗರಗಳಲ್ಲಿ ಖದೀಮರ ಕಾಟ ಮಿತಿ ಮೀರಿದೆ. ಇತ್ತೀಚೆಗೆ ನಗರದಲ್ಲಿ ಪೋಲಿಸರ ಕಾರ್ಯಾಚರಣೆಯಲ್ಲಿ 21 ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.  ಸಿಸಿ ಕ್ಯಾಮರಾ, ನೈಟ್ ವಾಚ್ ಮನ್ ಗಳಿದ್ದರೂ ಯಾಮಾರಿಸಿ ಮನೆಗಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಸರಣಿ ಕಳ್ಳತನಗಳಿಂದ ಚಿಂತೆಗೀಡಾದ ಮಹಿಳೆಯರು ತಮ್ಮ ಧೈರ್ಯ ಪ್ರದರ್ಶನಕ್ಕೆ ಮುಂದಾಗಿ ಕಳ್ಳ ಕೈ ಚಳಕ ಬೇದಿಸಲು ಸೊಂಕ ಕಟ್ಟಿ ನಿಂತಿದ್ದಾರೆ.

ರಾತ್ರಿ ಸಮಯದಲ್ಲಿ ಪೆಪ್ಪರ್ ಸ್ಪ್ರೇ ಹಾಕಿ ದಂಡ ಇಡಿದು ಸ್ವತಹ ಕಾವಲಿಗೆ ನಿಂತಿದ್ದಾರೆ.

ಸೆ.6 ರಾತ್ರಿ ಆಕ್ಮೆ ಬ್ಯಾಲೆಟ್ ಅಪಾರ್ಟ್ಮೆಂಟ್ ಒಂದಕ್ಕೆ ನುಸುಳಿದ ಕಳ್ಳರು 3ಲಕ್ಷ ರೂ. ಮೊತ್ತದ ಚಿನ್ನಾಭರಣ ಮತ್ತು ಹತ್ತು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.

ಇಂತಹ ಘಟನೆಗಳು ಆ.26 ರಂದು ಒಂದು ಮನೆಯಲ್ಲಿ  8 ಲಕ್ಷ, ಮತ್ತೊಂದು ಮನೆಯಲ್ಲಿ  3 ಲಕ್ಷ ರೂ. ಕಳವು ಮಾಡಿ ರಾತ್ರಿಯಿಡಿ ಮನೆಯಲ್ಲೆ ತಂಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಮೇಲಂತಸ್ತಿನ ಮನೆಗಳನ್ನು ತಮ್ಮ ಕಳ್ಳತನದ ಕ್ಷೇತ್ರವಾಗಿಸಿಕೊಂಡಿರುವ ಕಳ್ಳರು ಬೇರಾರೂ ಅಲ್ಲ. ಇಲ್ಲಿಯ ಸ್ಥಳೀಯ ಹಾಗೂ ಪ್ರತಿಯೊಂದು ಗೊತ್ತಿರುವ ಐಷಾರಾಮಿ ಕತರ್ನಾಕ್ ಕಳ್ಳರ ಕೈವಾಡ ಎಂದು ಮಹಿಳೆಯರ ಅರಿವಿಗೆ ಬಂದು ವಾಚ್ ಮನ್ ಕೆಲಸ ಮಾಡುತ್ತಿದ್ದಾರೆ.

ಕಳೆದ ಜುಲೈ ತಿಂಗಳಿಂದ ಆರಂಭವಾಗಿರುವ ಸರಣಿ ಕಳ್ಳತನ ಪ್ರಕರಣಗಳಿನ್ನೂ ನಿಂತಿಲ್ಲ. ಸಂಜೆಯಾಗುತ್ತಲೇ ಬೀದಿ ಕಳ್ಳರು ದರೋಡೆಕೋರರು ಒಂದು ಕಡೆ ಆದರೆ ರಾತ್ರಿ ವೇಳೆ ಮನೆ ದರೋಡೆಕೊರರ ಕಾಟಕ್ಕೆ ನಗರದ ಜನತೆ ಜೀವ ಭಯದಿಂದ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕ್ಕಪಕ್ಕ ಕಟ್ಟಡಗಳ ನಿರ್ಮಾಣ ಕೆಲಸಗಳು ನಡೆಯುತ್ತಿವೆ. ಕಟ್ಟಡ ಕಾರ್ಮಿಕರು ಇಲ್ಲಿನ ಆಗು ಹೋಗು ತಿಳಿದುಕೊಂಡು ಕಳ್ಳತನಕ್ಕೆ ಇಳಿದಿರುವ ಬಗ್ಗೆ  ಕೆಲ ಮಹಿಳೆಯರು ಅನು ಮಾನ ವ್ಯಕ್ತ ಪಡಿಸಿದ್ದಾರೆ ಆದರೂ ಮತ್ತೆ ಕೆಲವರು ಕೂಲಿ ಮಾಡುವವರು ಇಂತಹ ಕೃತ್ಯ ಮಾಡಲು ಹೇಗೆ ಸಾದ್ಯ ಎಂದು ಅವರಲ್ಲೇ  ಕೆಲವರು ಇದು ಸಾದ್ಯ ಹಾಗು ಸಾದ್ಯವಿಲ್ಲ ಎಂದು ಹೇಳಿದರಾದರೂ ಅಂತಿಮವಾಗಿ ಈಗಾಗಲೆ ಸಂಬಂಧಿಸಿದ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಪೋಲಿಸರು ನೋಡಿಕೊಳ್ಳುತ್ತಾರೆಂಬುದು ಕೆಲವರ ಅಭಿಪ್ರಾಯ ಕೇಳಿ ಬಂದಿದೆ ಆದರೂ ರಾತ್ರಿ ವೇಳೆ ಕಳ್ಳರಿಗಾಗಿ ಒನಕೆ ಓಬವ್ವಗಳಾಗಿದ್ದಾರೆ ಇಲ್ಲಿನ ಮಹಿಳೆಯರು.

ಸರಣಿ ಕಳ್ಳತನಗಳ ಕುರಿತು ಮಾತನಾಡಿರುವ ಡಿಸಿಪಿ ಅನುಚೇತ್  ಹಲವಾರು ಸಾರಿ ಇಲ್ಲಿನ ನಿವಾಸಿಗಳ ಜೊತೆ ಮುಕ್ತವಾಗಿ ಮಾತನಾಡಿದ್ದೇವೆ. ನಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಸಮಗ್ರ ಮಾಹಿತಿ ಸಂಗ್ರಹ ಮಾಡಿ ಆರೋಪಿಗಳಿಗೆ ಬಲೆ ಬೀಸಿರುವುದಾಗಿ ತಿಳಿಸಿ ಇಲ್ಲಿ ಹೆಚ್ಚು ಗಸ್ತು ಸಿಬ್ಬಂದಿ ನೇಮಕ ಮಾಡಿರುವುದಾಗಿ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos