ನೈಜೆರಿಯಾ ಪ್ರಜೆ ಕೊಲೆ

ನೈಜೆರಿಯಾ ಪ್ರಜೆ ಕೊಲೆ

ಬೆಂಗಳೂರು,ನ. 4 : ವಿದೇಶಿ ಸ್ನೇಹಿತರ ನಡುವಿನ ಜಗಳದಲ್ಲಿ ಕಪಾಳಕ್ಕೆ ಹೊಡೆದ ಸಿಟ್ಟಿಗಾಗಿ ಮಲಗಿರುವ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ನೈಜೀರಿಯಾದ ಪ್ರಜೆ ಮಾರೋಡೆ(೩೯).
ನೈಜೀರಿಯಾದ ಮತ್ತೊಬ್ಬ ಪ್ರಜೆ ವಿದ್ಯಾರ್ಥಿ ಸಾಮ್ಯುಲ್(೩೦) ಕೊಲೆ ಆರೋಪಿಯಾಗಿದ್ದಾನೆ.  ಓದು ಮುಗಿದರೂ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ. ಸಾಮ್ಯುಲ್ ಕೂಡ ಓದಿಗಾಗಿಯೇ ಬಂದಿದ್ದು, ಇವರಿಬ್ಬರೂ ಜಾನಕಿರಾಮ್ ಲೇಔಟ್ನಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು.
ಒಂದೇ ದೇಶದವರಾಗಿದ್ದರಿಂದ ಆಗಾಗ್ಗೆ ಒಂದೆಡೆ ಸೇರಿ ಸಮಯ ಕಳೆಯುತ್ತಿದ್ದರು. ನಿನ್ನೆ ಸಂಜೆ ೪ ಗಂಟೆ ವೇಳೆಗೆ ಒಂದೆಡೆ ಸೇರಿದ್ದಾಗ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ.
ಈ ಸಂದರ್ಭದಲ್ಲಿ ಮಾರೋಡೆ ಸಾಮ್ಯುಲ್ನ ಕಪಾಳಕ್ಕೆ ಬಾರಿಸಿದ್ದಾನೆ ಎನ್ನಲಾಗಿದೆ. ಜೊತೆಯಲ್ಲಿದ್ದವರು ಸಮಾಧಾನಪಡಿಸಿ ಜಗಳ ಬಿಡಿಸಿದ್ದಾರೆ.
ತನ್ನ ಮೇಲಾದ ಹಲ್ಲೆಯಿಂದ ಸಿಟ್ಟುಗೊಂಡಿದ್ದ ಸಾಮ್ಯುಲ್ ಇಂದು ಮುಂಜಾನೆ ೪ ಗಂಟೆಗೆ ಮಾರೋಡೆ ಮನೆಗೆ ಬಂದು ಮಲಗಿದ್ದ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆಂದು ಪೂರ್ವವಿಭಾಗದ ಡಿಸಿಪಿ ಡಾ.ಎಸ್.ಟಿ.ಶರಣಪ್ಪ ತಿಳಿಸಿದ್ದಾರೆ. ಹೆಣ್ಣೂರು ಠಾಣೆ ಪೊಲೀಸರು ಸಾಮ್ಯುಲ್ನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos