ನಿದ್ರೆ ಮಾಡ್ತೀರ?

ನಿದ್ರೆ ಮಾಡ್ತೀರ?

ಬೆಂಗಳೂರು, ಸೆ. 20 : 7-8 ಗಂಟೆಗಳಿಗಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಪ್ರತಿ ದಿನ ಒಂಬತ್ತರಿಂದ ಹತ್ತು ತಾಸುಗಳಿಗೂ ಅಧಿಕ ಕಾಲ ನಿದ್ರೆ ಮಾಡುವವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅತಿಯಾದ ನಿದ್ರೆಯಿಂದ ಉಂಟಾಗುವ ತೊಂದರೆಗಳೆಂದರೆ ಮಧುಮೇಹದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಆರರಿಂದ ಎಂಟು ಗಂಟೆಗಳ ಕಾಲ ಮಲಗುವ ಜನರಿಗೆ ಹೋಲಿಸಿದರೆ ಪ್ರತಿ ರಾತ್ರಿ ಸುಮಾರು ಹತ್ತು ಗಂಟೆಗಳ ಕಾಲ ನಿದ್ರಿಸುವವರು ಬೊಜ್ಜು ಹೊಂದುವ ಸಾಧ್ಯತೆಯಿದೆ. ಅನೇಕರು ರಜಾದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ನಿದ್ರೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಆದರೆ ಇದರಿಂದ ತಲೆನೋವು ಉಂಟಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos