ನೈಸ್ ರಸ್ತೆಯಲ್ಲಿ ಹಣ ವಸೂಲಿ

ನೈಸ್ ರಸ್ತೆಯಲ್ಲಿ ಹಣ ವಸೂಲಿ

ರಾಮನಗರ, ನ. 6 : ನಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ಧ ಇಬ್ಬರ ಖತರ್ನಾಕ್ ಕಳ್ಳರನ್ನು ರಾಮನಗರ ಗ್ರಾಮಾಂತರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನರಸಿಂಹಯ್ಯನದೊಡ್ಡಿ ಗ್ರಾಮದ ನಿವಾಸಿ ರಘು (33) ಹಾಗೂ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ ರವೀಶ್ ಬಂಧಿತ ಆರೋಪಿಗಳು.
ಬೆಂಗಳೂರು – ಮೈಸೂರು ಹೆದ್ದಾರಿ ಹಾಗೂ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವವರನ್ನ ತಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ವಸೂಲಿ ಮಾಡ್ತಿದ್ದ ಇಬ್ಬರು ಖತರ್ನಾಕ್ ಬಂಧಿತ ರಘು ತನ್ನ ಸಂಗಡಿಗರಾದ ರವೀಶ್ ಹಾಗೂ ವೆಂಕಟಗಿರಿಗೌಡ ಜೋಡಿ ವಾಹನ ಸವಾರನ್ನು ಟಾರ್ಗೆಟ್ ಮಾಡಿಕೊಂಡು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos