ಬಿಎಂಟಿಸಿ ನೂತನ ಸೇವೆಗೆ ಸಿಎಂ ಚಾಲನೆ!

ಬಿಎಂಟಿಸಿ ನೂತನ ಸೇವೆಗೆ ಸಿಎಂ ಚಾಲನೆ!

ಬೆಂಗಳೂರು, ಜೂನ್.7, ನ್ಯೂಸ್ ಎಕ್ಸ್ ಪ್ರೆಸ್ :  ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ತಕ್ಷಣವೇ ಧಾವಿಸಲು 25 ಪಿಂಕ್‌ ಸಾರಥಿ ಗಸ್ತು ವಾಹನಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹಸಿರು ನಿಶಾನೆ ತೋರಿದರು. ಗುರುವಾರ ವಿಧಾನಸೌಧ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಬಿಎಂಟಿಸಿಯ ನೂತನ ಸೇವೆಗೆ ಚಾಲನೆ ನೀಡಿದರು.

ನಿರ್ಭಯ ಯೋಜನೆಯಡಿ 25 ಪಿಂಕ್‌ ಸಾರಥಿ ಗಸ್ತು ವಾಹನಗಳನ್ನು .4.30 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿದ್ದು, ಈ ವಾಹನಗಳು ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲಿವೆ. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾದರೆ ಕೂಡಲೇ ಅವರ ರಕ್ಷಣೆಗೆ ಈ ವಾಹನಗಳು ಧಾವಿಸಲು ಅನುಕೂಲವಾಗುವಂತೆ ಜಿಪಿಎಸ್‌ ಅಳವಡಿಸಲಾಗಿದೆ. ಬಿಎಂಟಿಸಿ ನಿಯಂತ್ರಣ ಕೊಠಡಿಯಿಂದ ಪಿಂಕ್‌ ಸಾರಥಿ ವಾಹನಗಳ ಮೇಲೆ ನಿಗಾ ಇಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿ ತಂದಿರುವ ನಿರ್ಭಯ ಯೋಜನೆಯಡಿ ಬಿಎಂಟಿಸಿಗೆ .56.07 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಮಹಿಳೆಯರ ರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಈ ಯೋಜನೆಯಡಿ 25 ಪಿಂಕ್‌ ಸಾರಥಿ ಗಸ್ತುವಾಹನಗಳು ಮಹಾನಗರದಲ್ಲಿ ಜೂ.6ರಿಂದಲೇ ಕಾರ್ಯಾಚರಣೆ ಆರಂಭಿಸಿವೆ. ಸಿಲುಕಿದ ಮಕ್ಕಳು, ಮಹಿಳಾ ಪ್ರಯಾಣಿಕರು 77609 91212 (ವಾಟ್ಸಪ್‌) 1800 425 1663 (ಟೋಲ್‌ ಫ್ರೀ) ಮೂಲಕ ಸಂಪರ್ಕಿಸಿ ಪಿಂಕ್‌ ಸಾರಥಿ ವಾಹನಗಳ ನೆರವು ಪಡೆಯಬಹುದು.

ಫ್ರೆಶ್ ನ್ಯೂಸ್

Latest Posts

Featured Videos