ಐಸಿಸಿ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕಿಳಿದ ನ್ಯೂಜಿಲ್ಯಾಂಡ್

ಐಸಿಸಿ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕಿಳಿದ ನ್ಯೂಜಿಲ್ಯಾಂಡ್

ತನ್ನ ನೆಲದಲ್ಲಿ ಟೀಂ ಇಂಡಿಯಾ ಮುಂದೆ ಏಕದಿನ ಸರಣಿ ಸೋತಿರುವ ನ್ಯೂಜಿಲ್ಯಾಂಡ್ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಿಳಿದಿದೆ.

ಭಾನುವಾರ ನಡೆದ ಐದನೇ ಹಾಗೂ ಕೊನೆ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭಾರತದ ವಿರುದ್ಧ 35 ರನ್ ಗಳ ಸೋಲುಂಡಿದೆ. ಈ ಮೂಲಕ ಭಾರತ 4-1ರಿಂದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಐಸಿಸಿ ಬಿಡುಗಡೆ ಮಾಡಿರುವ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ನಾಲ್ಕನೇ ಸ್ಥಾನಕ್ಕಿಳಿದಿದೆ. ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ 111-111
ಅಂಕಗಳ ಸಮಬಲದಲ್ಲಿದೆ. ಆದ್ರೆ ದಶಾಂಶ ಅಂಕಗಳ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ನ್ಯೂಜಿಲ್ಯಾಂಡ್ ಹಿಂದಿಕ್ಕಿದೆ.

ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದಿರುವ ಟೀಂ ಇಂಡಿಯಾಕ್ಕೆ ಒಂದು ಅಂಕ ಸಿಕ್ಕಿದ್ದು, 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ.ಭಾರತದ ರೇಟಿಂಗ್ ಈಗ 122ಕ್ಕೇರಿದೆ. ವಿಶ್ವಕಪ್ ಆತಿಥ್ಯ ವಹಿಸಲಿರುವ ಇಂಗ್ಲೆಂಡ್ 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಏಕದಿನ ಸರಣಿ ಆರಂಭಕ್ಕಿಂತ ಮೊದಲು ಭಾರತ 121 ಅಂಕ ಹಾಗೂ ನ್ಯೂಜಿಲ್ಯಾಂಡ್ 113 ಅಂಕದಲ್ಲಿತ್ತು.

ಆದ್ರೆ ಸರಣಿ ನಂತ್ರ ಭಾರತ 122 ಅಂಕ ಪಡೆದ್ರೆ ನ್ಯೂಜಿಲ್ಯಾಂಡ್ ಸರಣಿ ಸೋತು 111 ಅಂಕಕ್ಕಿಳಿದಿದೆ. ಇನ್ನು ಪಾಕಿಸ್ತಾನ 102 ಅಂಕ ಪಡೆದು ಐದನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ 100 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos