ಮಿಲ್ಕಿ ಬ್ಯುಟಿಯಿಂದ ಹೊಸ ವರ್ಷದ ಪಾರ್ಟಿ

ಮಿಲ್ಕಿ ಬ್ಯುಟಿಯಿಂದ ಹೊಸ ವರ್ಷದ ಪಾರ್ಟಿ

ಮುಂಬೈ, ಡಿ. 31 : ಎಲ್ಲರೂ ಇಂದು ಪಾರ್ಟಿ ಮಾಡುವ ಉತ್ಸಾಹದಲ್ಲಿದ್ದಾರೆ. ನಟಿ ತಮನ್ನಾ ಭಾಟಿಯಾ ಕೂಡ ಹೊರತಲ್ಲ. ತಮನ್ನಾ ಮನೆಯಲ್ಲಿ ಇವತ್ತು ರಾತ್ರಿ ಪಾರ್ಟಿ!
ಆಜ್ ರಾತ್ ಮೇರೆ ಘರ್ ಮೇ ಪಾರ್ಟಿ ಹೈ. ತೂ ಆಜಾನಾ (ಇವತ್ತು ರಾತ್ರಿ ನಮ್ಮ ಮನೆಯಲ್ಲಿ ಪಾರ್ಟಿ ಇದೆ. ನೀನು ಬಾ) ಎಂದು ನಟಿ ತಮನ್ನಾ ಭಾಟಿಯಾ ಆಹ್ವಾನ ನೀಡಿದ್ದಾರೆ. ಹಾಗಂತ ನೀವೇನಾದರೂ ನೇರವಾಗಿ ಅವರ ಮನೆ ಅಡ್ರೆಸ್ ಹುಡುಕಿ ಹೊರಟರೆ ನಿರಾಸೆ ಆಗಬಹುದು! ಯಾಕೆಂದರೆ, ಅವರು ಹೀಗೆ ಆಹ್ವಾನ ನೀಡಿರುವುದು ಹೊಸದಾಗಿ ರಿಲೀಸ್ ಆಗಿರುವ ಹಾಡಿನಲ್ಲಿ ಮಾತ್ರ. ತಮನ್ನಾ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಇಂದು ಯಾರೆಲ್ಲ ಹೊಸ ವರ್ಷದ ಪಾರ್ಟಿ ಮಾಡಬೇಕೆಂದುಕೊಂಡಿದ್ದಾರೋ ಅವರಿಗೆಲ್ಲ ಈ ಗೀತೆ ಹೇಳಿ ಮಾಡಿಸಿದಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos