ರಾಜ್ಯದಲ್ಲಿ ಮತ್ತೆ ‘ನೂತನ ಸಂಚಾರಿ ದಂಡ’ ಜಾರಿ?

ರಾಜ್ಯದಲ್ಲಿ ಮತ್ತೆ ‘ನೂತನ ಸಂಚಾರಿ ದಂಡ’ ಜಾರಿ?

ಬೆಂಗಳೂರು, ಜ. 07: ಕೇಂದ್ರ ಸರ್ಕಾರ ಇತ್ತೀಚೆಗೆ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದ್ರೇ ಅನೇಕ ರಾಜ್ಯಗಳು ಕೇಂದ್ರ ಸರ್ಕಾರದ ಇಂತಹ ದಂಡವನ್ನು ವಿಧಿಸಲು ಒಪ್ಪಿಕೊಂಡಿರಲಿಲ್ಲ. ಜೊತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ದಂಡವನ್ನು ಪುನರ್ ಬದಲಾವಣೆ ಮಾಡಿದ್ದವು. ರಾಜ್ಯಗಳು ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಇಳಿಸುವ ಹಕ್ಕು ಹೊಂದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಮತ್ತೆ ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಸಂಚಾರಿ ದಂಡ ರಾಜ್ಯದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

ಲೋಕಸಭೆಯಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಅಂಗೀಕಾರವಾಗುವ ಮೂಲಕ, ನೂತನ ಸಂಚಾರಿ ನಿಯಮ ಉಲ್ಲಂಘನೆಯ ದಂಡ, ದುಪ್ಪಟ್ಟಾಗಿ ಬದಲಾವಣೆ ಆಗುವ ಮೂಲಕ, ವಾಹನ ಸವಾರರಿಗೆ ಬಿಸಿ ಮುಟ್ಟಿಸಿತ್ತು. ಇಂತಹ ದುಪ್ಪಟ್ಟು ದಂಡದಿಂದಾಗಿ ರಾಜ್ಯದ ವಾಹನ ಸವಾರರು ಹೈರಾಣಾಗಿ ಹೋಗಿದ್ದರು. ಆದ್ರೇ ಕೆಲ ರಾಜ್ಯಗಳು ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು ಇಳಿಕೆ ಮಾಡಿ, ಮಾರ್ಪಡಿಸಿದ್ದವು.

ಈ ಸಂಬಂಧ ರಾಜ್ಯಗಳಿಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸೂಚನೆ ಕಳುಹಿಸಿದ್ದು, ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸಂಸತ್ತು ಅಗೀಕರಿಸಿದೆ. ರಾಜ್ಯಗಳು ರೂಪಿಸಿದ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ ಇಲ್ಲದ ಹೊರತು ರಾಜ್ಯಗಳು ದಂಡ ಶುಲ್ಕ ಕಡಿತಗೊಳಿಸಬಾರದು ಎಂಬುದಾಗಿ ತಿಳಿಸಿದೆ.

ಕೇಂದ್ರ ಸರ್ಕಾರದ ಕಾಯ್ದೆಯ ಬಳಿಕ ರಾಜ್ಯವೊಂದು ದಂಡದ ಮೊತ್ತ ಕಡಿತಗೊಳಿಸಿದ್ದರ ಬಗ್ಗೆ ಸಾರಿಗೆ ಸಚಿವಾಲಯ ಕಾನೂನು ಸಚಿವಾಲಯದ ಸಲಹೆ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಅಟಾರ್ನಿ ಜನರಲ್, ಮೋಟಾರು ವಾಹನ ಕಾಯ್ದೆಯು ಸಂಸತ್ತಿನ ಕಾಯ್ದೆ. ರಾಜ್ಯಗಳು ಇದರಲ್ಲಿ ಉಲ್ಲೇಖಿಸಿದ ಮೊತ್ತ ಕಡಿತಗೊಳಿಸಲಾಗದು. ಕಾಯ್ದೆ ರೂಪಿಸಿದ್ದರೆ ಅದಕ್ಕೆ ರಾಷ್ಟçಪತಿ ಅನುಮೋದನೆ ಅಗತ್ಯ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.

ಈ ಹಿನ್ನಲೆಯಲ್ಲಿ ಇದೀಗ ರಾಜ್ಯಗಳು ತಾವಾಗಿದೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿದ್ದ ನೂತನ ಸಂಚಾರಿ ದಂಡ ಉಲ್ಲಂಘನೆ ನಿಯಮ ಬದಲಾವಣೆಗೆ ಬ್ರೇಕ್ ಬೀಳಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದಂಡದ ಅನುಸಾರದಂತೆ ರಾಜ್ಯದಲ್ಲೂ ವಾಹನ ಸವಾರರು ದಂಡ ಪಾವತಿಸುವ ನಿರ್ಧಾರ ಸದ್ಯದಲ್ಲಿಯೇ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ಉಂಟಾಗಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos