ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ಕರಟಕ ಗಮನಕ ಚಿತ್ರದ ಹೊಸ ಹಾಡು

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ಕರಟಕ ಗಮನಕ ಚಿತ್ರದ ಹೊಸ ಹಾಡು

ಬೆಂಗಳೂರು: ಕರಟಕ ದಮನಕ ಚಿತ್ರದ ಡೈರೆಕ್ಟರ್ ಯೋಗರಾಜ್ ಭಟ್ರು ಮತ್ತೊಂದು ಹಾಡು ಬರೆದಿದ್ದಾರೆ. ಹುಡುಗರ ಎದೆ ಬೆಚ್ಚಗೆ ಮಾಡೋ ಹಾಡು ಇದಾಗಿದೆ. ಪ್ರತಿ ಸಾಲು ಇಲ್ಲಿ ರಸವತ್ತಾಗಿಯೇ ಇವೆ. ಸಡನ್ ಆಗಿಯೇ ಈ ಹಾಡು ಬೇರೆಯವರಿಗೆ ಕನೆಕ್ಟ್ ಆಗೋದಿಲ್ಲ. ಆದರೆ ಉತ್ತರ ಕರ್ನಾಟಕದ ಹುಡುಗರಿಗೆ ಇದು ತುಂಬಾನೆ ಮಜಾ ಕೊಡುತ್ತದೆ. ಇತ್ತಕಡೆಯ ಯುವಕರ ಮನಸನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿರೋ ಭಟ್ರು ಹೊಸ ರೀತಿಯ ಹಾಡನ್ನ ಬರೆದುಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಇದಕ್ಕೆ ಒಳ್ಳೆ ಗಾಯಕರನ್ನೆ ಆಯ್ಕೆ ಮಾಡಿದ್ದಾರೆ. ಒಳ್ಳೆ ವಿಷ್ಯೂಲ್ ಕೂಡ ಈ ಒಂದು ಹಾಡಿಗೆ ಇದೆ. ಕಲಾವಿದರೂ ಈ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಎಲ್ಲವೂ ಸೇರಿ ಇಡೀ ಈ ಒಂದು ಹಾಡು ಮಜಾ ಕೊಡುತ್ತಿದೆ.

ಮಾರ್ಚ್ 8ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ‘ಕರಟಕ ಗಮನಕ’ ಚಿತ್ರದ “ಹಿತ್ತಲಕ ಕರಿಬ್ಯಾಡ ಮಾವ” ಹಾಡು ಇತ್ತೀಚಿಗಷ್ಟೇ youtubeನಲ್ಲಿ ಬಿಡುಗಡೆಯಾಗಿದ್ದು, 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಮಲು ನಿಪಾನಲ್ ಮತ್ತು ಶೃತಿ ಪ್ರಹಲ್ಲಾದ ಧ್ವನಿಯಾಗಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಡ್ಯಾನ್ಸ್ ಕಿಂಗ್ ಪ್ರಭುದೇವ್ ಜೊತೆ ನಿಶ್ಚಿಕಾ ನಾಯ್ದು ಹೆಜ್ಜೆ ಹಾಕಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಪ್ರಭುದೇವ್, ಪ್ರಿಯಾ ಆನಂದ್, ನಿಷ್ಕ್ರಿಕ ನಾಯ್ಡು, ಪ್ರಮುಖ ಪಾತ್ರದಲ್ಲಿದ್ದು, ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಸಂತೋಪ್ ರಾಯ್ ವತಾಜಿ ಛಾಯಾಗ್ರಹಣವಿದೆ.

ಫ್ರೆಶ್ ನ್ಯೂಸ್

Latest Posts

Featured Videos