ಕೊರೋನಾ ರೋಗಿಗಳಿಗೆ ಹೊಸ “ಪ್ಲಾಸ್ಮಾ”

ಕೊರೋನಾ ರೋಗಿಗಳಿಗೆ ಹೊಸ “ಪ್ಲಾಸ್ಮಾ”

ಮೈಸೂರು: ಕೊರೋನಾ ರೋಗದಿಂದ ಗಂಭೀರವಾಗಿ ಆರೋಗ್ಯ ಸ್ಥಿತಿಯಲ್ಲಿರುವ ರೋಗಿಗಳಿಗೆ ಹೊಸದೊಂದು ಭರವಸೆ ಸಿಕ್ಕಿದೆ, ಪ್ಲಾಸ್ಮಾ ಹೊಸ ಯಂತ್ರವನ್ನು ಅಳವಡಿಸಲಾಗಿದೆ.ಜೀವಾಧಾರ ಎಂಬ ನಗರದ ಬ್ಲಡ್ ಬ್ಯಾಂಕ್ ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗಿದ್ದು ಅದನ್ನು ಉದ್ಘಾಟಿಸಿ, ಇದರಿಂದ ಒಂದೇ ದಿನ ೫-೬ ಪ್ಲಾಸ್ಮಾ ತೆಗೆಯಬಹುದಾಗಿದೆ.
ಇದೇ ಮೊಟ್ಟ ಮೊದಲ ಪ್ಲಾಸ್ಮಾ ಯಂತ್ರ ಮೈಸೂರಿನಲ್ಲಿ ಸ್ಥಾಪಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿದೆ. ಇದನ್ನು ೧೬-೧೭ ಲಕ್ಷ ರು ನೀಡಿ ಖರೀದಿಸಲಾಗಿದೆ. ಬಿಜೆಪಿ ನಗರ ಅಧ್ಯಕ್ಷ ಶ್ರೀವತ್ಸ ಮತ್ತಿತರರು ಇದನ್ನು ಉದ್ಘಾಟಿಸಿದರು.
ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳಿಂದ ಸುಮಾರು ೩೫೦-೪೦೦ ಮಿಲಿ ರಕ್ತ ತೆಗೆಯಬೇಕಾಗಿತ್ತು, ಆದರೆ ಈ ಯಂತ್ರದಿಂದ ೧೫೦ ರಿಂದ ೨೦೦ ಎಮ್ ಎಲ್ ಪ್ಲಾಸ್ಮಾ ಮಾತ್ರ ಬರುತ್ತಿತ್ತು. ಆದರೆ ಹೊಸ ಯಂತ್ರದಿಂದ ಪ್ಲಾಸ್ಮಾ ದಾನ ನೀಡುವವರಿಂದ ನೇರವಾಗಿ ೫೦೦ ಎಂಎಲ್ ಪ್ಲಾಸ್ಮಾ ತೆಗೆಯಬಹುದಾಗಿದೆ, ಇದರ ನಂತರ ೯೦ ದಿನಗಳ ವರೆಗೆ ಮತ್ತೆ ದಾನಿಗಳು ದಾನ ಮಾಡುವ ಆಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos