ನ್ಯಾಯಕ್ಕೆ ಎಂದಿಗೂ ಸೋಲಿಲ್ಲ – ಶಾಸಕ ಎ.ಎಸ್. ಪಾಟೀಲ

  • In State
  • August 4, 2020
  • 194 Views
ನ್ಯಾಯಕ್ಕೆ ಎಂದಿಗೂ ಸೋಲಿಲ್ಲ – ಶಾಸಕ ಎ.ಎಸ್. ಪಾಟೀಲ

ಮುದ್ದೇಬಿಹಾಳ: ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಪಡೆಯಲು ರಾಜಕೀಯ ರಣತಂತ್ರಗಳನ್ನು ಬೆಸೆದರು ಸಾಧ್ಯವಾಗದೇ ಅಧಿಕಾರದ ಗದ್ದುಗೆ ನಮ್ಮ ಪಕ್ಷವೇ ಸಾಧಿಸಿದ್ದು ನ್ಯಾಯ ಗೆದ್ದಂತಾಗಿದೆ ಎಂದು ಶಾಸಕ ಎ.ಎ.ಸ್. ಪಾಟೀಲ (ನಡಹಳ್ಳಿ) ನುಡಿದರು. ನೂತನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಪವಾಡೇಪ್ಪ ಹವಾಲ್ದಾರ  ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರದ ಗದ್ದುಗೆಗಾಗಿ ರಾಜಕೀಯ ತಂತ್ರಗಳು ಫಲಿಸುವುದಿಲ್ಲ. ನ್ಯಾಯ ಎಂದಿಗೂ ಸೋಲುವುದಿಲ್ಲ. ಕುತಂತ್ರ ರಾಜಕಾರಣ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಈಗ ಆಗಿರುವುದೇ ಸಾಕೆಂಬಂತೆ ನಾನೇ ಸುಮ್ಮನಿದ್ದೇನೆಂದರು. ನಮಗೆ ಎಲ್ಲರೂ ಒಂದೇ. ಎಲ್ಲರ ಉದ್ದೇಶವೂ ಮತಕ್ಷೇತ್ರದ ಅಭಿವೃದ್ದಿಯೇ ಆಗಿರಬೇಕು. ನನ್ನ ಹೆಸರು ಕೆಡಿಸುವ ಪ್ರಯತ್ನ ಯಾರೇ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಆಶೀರ್ವಾದವಿದೆ. ಬಿಜೆಪಿ ಪಕ್ಷ ಎಂದೂ ಅನ್ಯಾಯದ ದಾರಿ ತುಳಿಯುವುದಿಲ್ಲ. ಮತಕ್ಷೇತ್ರದ ಬಡ ಜನರ, ಸಾಮಾನ್ಯ ವರ್ಗದವರ ಕಾರ್ಮಿಕರ ರಕ್ಷಣೆ ಮಾಡುವ ಮೂಲಕ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

ಪಟ್ಟಣ ಸೇರಿದಂತೆ ತಾಳಿಕೋಟಿ, ನಾಲತವಾಡ ಪಟ್ಟಣಗಳ ಸಮಗ್ರ ಅಭಿವೃದ್ಧಿಗಾಗಿ ಸುಮಾರು ೨೫ ಕೋಟಿಗಳ ವಿಶೇಷ ಅನುದಾನದಲ್ಲಿ ನಡೆಯುವ ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಆಗಮಿಸಲಿದ್ದು, ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ನುಡಿದರು.

ಈ ವೇಳೆ ತಹಶೀಲ್ದಾರ ಜಿ ಎಸ್ ಮಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪೂರೆ, ತಾಪಂ ಅಧ್ಯಕ್ಷ ಲಕ್ಷ್ಮೀಬಾಯಿ ಹವಾಲ್ದಾರ, ತಾಪಂ ಸದಸ್ಯರಾದ ಪಾರ್ವತಿ ಗುಡಿಮನಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಮುಖಂಡರಾದ ಪವಾಡೇಪ್ಪಗೌಡ ಹಲವಾಲ್ದಾರ, ಶಿವಾನಂದ ಲೋಟಗೇರಿ, ಮಂಜುನಾಥ ರತ್ನಾಕರ, ರಾಜು ಬಳ್ಳೋಳಿ ಸೇರಿದಂತೆ ಮತ್ತಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos