ನೆಟ್ಟಿಗರ ಫೆವರಿಟ್ ಡಿಕೆಶಿ ಗಡ್ಡ

ನೆಟ್ಟಿಗರ ಫೆವರಿಟ್ ಡಿಕೆಶಿ ಗಡ್ಡ

ಬೆಂಗಳೂರು, ಅ. 26: ಜೈಲು ವಾಸ ಅನುಭವಿಸಿ ಜಾಮೀನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಹೊಸ ಲುಕ್ ಭಾರಿ ಸದ್ದು ಮಾಡುತ್ತಿದೆ.

ಪ್ರಕರಣದ ವಿಚಾರಣೆಗಾಗಿ ಆಗಾಗ್ಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ಡಿ.ಕೆ.ಶಿವಕುಮಾರ್ ಕೃಶವಾದಂತೆ ಕಾಣುತ್ತಿದ್ದರು. ಜಾಮೀನಿನ ಮೇಲೆ ಹೊರಬಂದ ದಿನ ಲುಕ್ ಬದಲಾಗಿ ಹೋಗಿತ್ತು. ಡಿ.ಕೆ.ಶಿವಕುಮಾರ್ ಗಡ್ಡ ಬಿಟ್ಟು ಮಿಂಚುತ್ತಿದ್ದಾರೆ.

ಕಪ್ಪು-ಬಿಳಿ ಮಿಶ್ರಿತ ಗಡ್ಡವನ್ನು ಫ್ಯಾಷನ್ ಲೋಕದಲ್ಲಿ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಎಂದು ಕರೆಯಲಾಗುತ್ತದೆ. ಯಾವಾಗಲೂ ಕ್ಲೀನ್ ಶೇವ್‌ನಲ್ಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ರ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಗೆ ಅಭಿಮಾನಿಗಳು, ನೆಟ್ಟಿಗರು ಫಿದಾ ಆಗಿದ್ದಾರೆ.

ಕಬಾಲಿ ಚಿತ್ರದಲ್ಲಿ ರಜನೀಕಾಂತ್, ಕೋಟಿಗೊಬ್ಬದಲ್ಲಿ ವಿಷ್ಣುವರ್ಧನ್, ಚಕ್ರವರ್ತಿ ಸಿನಿಮಾದಲ್ಲಿ ದರ್ಶನ್ ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಇನ್ನೂ ಹಲವು ನಾಯಕರು ಈ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಮನೆ ದೇವರ ದರ್ಶನದ ಬಳಿಕ ಡಿ.ಕೆ.ಶಿವಕುಮಾರ್ ಗಡ್ಡ ತೆಗೆದು ಮತ್ತೆ ತಮ್ಮ ಹಳೆ ಲುಕ್‌ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಬರುತ್ತಿದ್ದು, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos