ನೇಪಾಳದಲ್ಲಿ ಚಂಡಮಾರುತ 30ಕ್ಕೂ ಹೆಚ್ಚು ಜನರ ಸಾವು

ನೇಪಾಳದಲ್ಲಿ ಚಂಡಮಾರುತ 30ಕ್ಕೂ ಹೆಚ್ಚು ಜನರ ಸಾವು

ಕಠ್ಮಂಡು, . 1, ನ್ಯೂಸ್ ಎಕ್ಸ್ ಪ್ರೆಸ್: ನೇಪಾಳದ ದಕ್ಷಿಣ ಭಾಗದಲ್ಲಿ ಭಾರೀ ಚಂಡಮಾರುತ ಮತ್ತು ಧಾರಾಕಾರ ಮಳೆಯಿಂದಾಗಿ 30ಕ್ಕೂ ಜನರು ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಭೀಕರ ಪ್ರಕೃತಿ ವಿಕೋಪದಲ್ಲಿ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ದಕ್ಷಿಣ ಭಾಗದ ಬಾರಾ ಜಿಲ್ಲೆ ಹಾಗೂ ಪರ್ಸಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ ಸಾವು -ನೋವು ಸಂಭವಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಚಂಡಮಾರುತವು ರಾಜಧಾನಿ ಕಠ್ಮಂಡುವಿನಿಂದ ಸುಮಾರು 128 ಕಿ.ಮೀ. ದೂರದಲ್ಲಿರುವ ಬಾರಾ ಜಿಲ್ಲೆಯಲ್ಲಿ ತನ್ನ ರುದ್ರನರ್ತನ ತೋರಿದೆ.

ಪ್ರಧಾನಿ ಕೆ.ಪಿ.ಶರ್ಮಾ ಒಲಿ ಚಂಡಮಾರುತ, ಮಳೆಯ ಕಾರಣ ಜೀವ ಕಳೆದುಕೊಂಡವರ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕಕ್ಕೆ ಕಾರ್ಯಾಚರಣೆಗೆ ಕರೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos