ನೆಹರೂ ಅವರ 128ನೇ ಜನ್ಮ

ನೆಹರೂ ಅವರ 128ನೇ ಜನ್ಮ

ನವದೆಹಲಿ,ನ. 14 : ದೇಶ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ 128ನೇ ಜನ್ಮ ದಿನಾಚರಣೆಯಂದು ಗುರುವಾರ ಗೌರವ ಸಲ್ಲಿಸಿದರು.
”ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಜನ್ಮದಿನ ವಾರ್ಷಿಕೋತ್ಸವದಂದು ಗೌರವ ನಮನ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಗೌರವ ಸಲ್ಲಿಸಿದ್ದಾರೆ.
ನೆಹರೂ ಅವರು ನವೆಂಬರ್ 14, 1889 ರಂದು ಅಲಹಾಬಾದ್ನಲ್ಲಿ ಜನಿಸಿದರು. (ಆಗಿನ ಯುನೈಟೆಡ್ ಪ್ರಾಂತ್ಯಗಳಾದ ಆಗ್ರಾ ಮತ್ತು ಊಧ್, ಈಗ ಉತ್ತರ ಪ್ರದೇಶ) ನೆಹರೂ ಅವರನ್ನು ಪ್ರೀತಿಯಿಂದ “ಚಾಚಾ ನೆಹರ” ಎಂದು ಕರೆಲಾಗುತ್ತಿತ್ತು. ಇವರು ಜನ್ಮ ದಿನಚರಣೆಯನ್ನು ಭಾರತದಾದ್ಯಂತ ಮಕ್ಕಳ ದಿನವನ್ನು (Children’s Day) ಆಚರಿಸಲಾಗುತ್ತದೆ.
ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ನೆಹರೂ ಮಹಾತ್ಮ ಗಾಂಧಿ ಅವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು. 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದ ದಿನದಿಂದ 1964ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos