ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದ ಗುರುತಿಸಿಕೊಂಡ ನಟಿ ನೇಹಾ ಪಾಟೀಲ್
ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನೇಹ
ಕುಟುಂಬವೇ ನೋಡಿ ನಿಶ್ಚಯಿಸಿದ ಹುಡುಗ ಪ್ರಣಾವ್ ಜೊತೆ ದಾಂಪತ್ಯದ ಪಥದತ್ತ ಚಲಿಸಲು ತೀರ್ಮಾನಿಸಿದ ಈ ಚೆಲುವೆಯ ಆರತಕ್ಷತೆ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿತು.

ವಿಜಯನಗರದ ಕಲ್ಯಾಣ ಮಂಟಪದಲ್ಲಿ ನಡೆದ ಆರತಕ್ಷತೆಗೆ ಚಿತ್ರರಂಗದ ಗಣ್ಯರು ಹಾಜರಿದ್ದರು. ‘ಗರ’ ಚಿತ್ರತಂಡದ ನಿರ್ದೇಶಕ ಮುರಳಿಕೃಷ್ಣ ಸೇರಿದಂತೆ ಕಲಾವಿದ, ನಿರೂಪಕ ರೆಹಮಾನ್, ನಟಿ‌ ಶರಣ್ಯಾ ದಂಪತಿ ಮತ್ತಿತರರು ಹಾಜರಿದ್ದರು.

ಆದರೆ ಆರಂಭದಿಂದ ಕೊನೆಯ ತನಕ ಜೊತೆಗಿದ್ದು ಸಂಭ್ರಮಿಸಿದವರಲ್ಲಿ ನೇಹಾರ ಸ್ನೇಹಿತೆ ದೀಪಿಕಾ ದಾಸ್ ಕೂಡ ಒಬ್ಬರು. ಮದುಮಗಳ ಜೊತೆಗೆ ಸಂಭ್ರಮದ ಹೆಜ್ಜೆ ಹಾಕಿದ ದೀಪಿಕಾ ದಾಸ್ ತಮ್ಮ ಖುಷಿಯನ್ನು ಹಂಚಿಕೊಂಡರು.

2011ರಲ್ಲಿ ಚಿತ್ರರಂಗ ಪ್ರವೇಶಿಸಿದ ನೇಹಾ ಪಾಟೀಲ್ ತಿಪ್ಪಜ್ಜಿ ಸರ್ಕಲ್, ಸಿತಾರ, ಪಾರು ವೈಫ್ ಆಫ್ ದೇವದಾಸ್ ಮೊದಲಾದ ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದ್ದರು. ಇಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಚಿತ್ರೋದ್ಯಮ ಮತ್ತು ಇತರ ಕ್ಷೇತ್ರಗಳ ಗಣ್ಯರನೇಕರು ಪಾಲ್ಗೊಳ್ಳುವುದಾಗಿ ನಿರೀಕ್ಷಿಸಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos