ನೀರು ಕೇಳಿದವರನ್ನು ‘ಹಣ್ಣುಗಾಯಿ ನೀರುಗಾಯಿ’ ಮಾಡಿದ ಪೊಲೀಸರು!

ನೀರು ಕೇಳಿದವರನ್ನು ‘ಹಣ್ಣುಗಾಯಿ ನೀರುಗಾಯಿ’ ಮಾಡಿದ ಪೊಲೀಸರು!

ಚಿಕ್ಕಬಳ್ಳಾಪುರ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ದರ್ಪತೋರಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮಪಂಚಾಯತ್‌ನಲ್ಲಿ ನಡೆದಿದೆ. ನಿನ್ನೆ (ಭಾನುವಾರ) ಸೂಕ್ತ ಕುಡಿಯುವ ನೀರಿಗಾಗಿ ನೀಡಬೇಕೆಂದು ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪೊಲೀಸರ ಹೊಡೆತಕ್ಕೆ  ಸ್ಥಳದಲ್ಲೇ ನಾಲ್ಕು ಜನ ಕುಸಿದು ಬಿದಿದ್ದರು. ಪೊಲೀಸರ ದೌರ್ಜನ್ಯ ಖಂಡಿಸಿ ಸಾರ್ವಜನಿಕರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ನೀರು ಬಿಡುವಂತೆ ಗ್ರಾಮಸ್ಥರು ಕೇಳಿದ್ದಕ್ಕೆ ವಾಟರ್ ಮ್ಯಾನ್ ಜಗಳ ಶುರುಮಾಡಿದ್ದಾನೆ. ಇದನ್ನು ಸೇಡಾಗಿ ಇಟ್ಟುಕೊಂಡು, ನಿನ್ನೆ ಗ್ರಾಮದ 6 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಮಂಚೇನಹಳ್ಳಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಈ ವಿಷಯ ಊರಿನ ಜನರಿಗೆ ತಿಳಿಯುತ್ತಿದ್ದಂತೆ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ರೌಡಿ ವಾಟರ್ ಮ್ಯಾನ್​ನನ್ನು ಕೆಲಸದಿಂದ ತೆಗೆದುಹಾಕಬೇಕೆಂದು ಪ್ರತಿಭಟನೆ ನಡೆಸಿದರು.  ಪ್ರತಿಭಟನಾಕಾರರ ದೂರು ಸ್ವೀಕರಿಸಿರುವ ಪಿಡಿಒ ಬಸವರಾಜ್  ಸಿಇಒಗೆ ರವಾನೆ ಮಾಡುವುದಾಗಿ ಭರವಸೆ ನೀಡಿದರು. ಇನ್ನು ಹಲ್ಲೆಗೊಳಗಾದ ಆರು ಜನರನ್ನು ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos