ವಂಚಕ ನೀರವ್ ಮೋದಿ ಬಂಧನ; ಚುನಾವಣೆಗಾಗಿ ಬಂಧನ ಎಂದ ಕಾಂಗ್ರೆಸ್

ವಂಚಕ ನೀರವ್ ಮೋದಿ ಬಂಧನ; ಚುನಾವಣೆಗಾಗಿ ಬಂಧನ ಎಂದ ಕಾಂಗ್ರೆಸ್

ಲಂಡನ್, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಹುಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ ಡೈಮಂಡ್ ವ್ಯಾಪಾರಿ ನೀರವ್ ಮೋದಿ ಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

ಕೆಲ ದಿವಸಗಳ ಹಿಂದೆ ನೀರವ್ ಲಂಡನ್ನಲ್ಲಿ ತಲೆಮರಿಸಿಕೊಂಡಿದ್ದಾರೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು, ಅವರನ್ನು ಗಡೀಪಾರು ಮಾಡುವ ಬಗ್ಗೆ ಭಾರತದ ಕೋರಿಕೆಯನ್ನು ಗೃಹ ಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವೀದ್ ದೃಢೀಕರಿಸಿದ ನಂತರ ಲಂಡನ್ನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯ ನೀರವ್ ಮೋದಿಗೆ ಅರೆಸ್ಟ್ ವಾರಂಟ್ ಹೊರಡಿಸಿತ್ತು.

ನೀರವ್ ಮೋದಿ ಬಂಧನದ ಬಗ್ಗೆ ಕಾಂಗ್ರೆಸ್ ವರಿಷ್ಠ ಮುಖಂಡರಾದ ಗುಲಾಮ ನಬಿ ಆಜಾದ್ ಅವರ ಪ್ರತಿಕ್ರಿಯೆಯ ನೀಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀರವ್ ಮೋದಿ ಪರಾರಿಯಾಗಲು ಬಿಜೆಪಿ ಸಹಾಯ ಮಾಡಿತ್ತು, ಇದೀಗ ಚುನಾವಣಾ ಲಾಭ ಪಡೆಯಲು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ನಂತರ ಮತ್ತೆ ಬಿಟ್ಟು ಬಿಡುತ್ತಾರೆ ಎಂದು ಆಜಾದ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos