ಚಾರ್ಮಾಡಿಯಲ್ಲಿ ಅರಳಿದ ನೀಲಾ ಕುರವಂಜಿ

ಚಾರ್ಮಾಡಿಯಲ್ಲಿ ಅರಳಿದ ನೀಲಾ ಕುರವಂಜಿ

ಚಿಕ್ಕಮಗಳೂರು, ಅ. 16: 12 ವರ್ಷಕ್ಕೊಮ್ಮೆ  ಅರಳುವ ಕುರವಂಜಿ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲ ಕಾಣೋ ಅಪರೂಪದ ಕುರವಂಜಿ ನೋಡುಗರ ಕಣ್ಮನ ಸೆಳೆಯೋದರ ಜೊತೆಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಮುಂಗಾರು ಮಳೆಯಿಂದಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಸೌಂದರ್ಯಮನೆಮಾಡಿದೆ. ಅದರಲ್ಲೂ, 12 ವರ್ಷಗಳಿಗೊಮ್ಮೆ ಅರಳೋ ಕುರುವಂಜಿಯಿಂದಾಗಿ ಚಂದ್ರದ್ರೋಣ ಪರ್ವತ, ದೇವರ ಮನೆ ಬೆಟ್ಟ, ಚಾರ್ಮುಡಿ ಬೆಟ್ಟ ಸೇರಿದಂತೆ ಕಾಫಿನಾಡ ಬೆಟ್ಟಗುಡ್ಡಗಳು ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ನೀಲಾಂಜಲಿಯೇ ಕಾಣುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಚಿಕ್ಕಮಗಳೂರಿನತ್ತ ಹರಿದು ಬರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos