ಮತ್ತೆ ಜೈಲು ಸೇರಿದ ನವಾಜ್ ಶರೀಫ್

ಮತ್ತೆ ಜೈಲು ಸೇರಿದ ನವಾಜ್ ಶರೀಫ್

ಪಾಕಿಸ್ತಾನ, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 3 ಭಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಶರೀಪ್ ಅಲ್ – ಅಜಿಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದಾರೆ. ಅವರಿಗೆ ಉನ್ನತ ನ್ಯಾಯಾಲಯದಿಂದ 6 ತಿಂಗಳ ಕಾಲ ಜಾಮೀನು ನೀಡಲಾಗಿತ್ತು.

ಮಾನಸಿಕ ಒತ್ತಡ ಹಾಗೂ ತೀವ್ರ ಆತಂಕದಲ್ಲಿದ್ದು, ಶಾಶ್ವತ ಜಾಮೀನು ನೀಡಬೇಕೆಂದು ಕೋರಿ ಏ. 27 ರಂದು ನವಾಜ್ ಶರೀಫ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಜಾಮೀನು ವಿಸ್ತರಣೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಪಿಎಂಎನ್ -ಎನ್ ಕಾರ್ಯಕರ್ತರ ಮೆರವಣಿಗೆಯೊಂದಿಗೆ ನವಾಜ್ ಶರೀಫ್ ಲಾಹೋರ್ ನಲ್ಲಿರುವ ಕೊಟ್ ಲಾಕ್ ಪಾತ್ ಜೈಲು ಸೇರಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos