ಕಸದ ತೊಟ್ಟಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಕಸದ ತೊಟ್ಟಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಕನಕಪುರ: ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ನಾನಾ ಸಮಸ್ಯೆ ಕಾಡುತ್ತಿದ್ದು ಎರಡನೇ ಬಾರಿ ಸ್ಥಳ ಗುರುತಿಸಿದರೂ ಅಲ್ಲಿಯೂ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ.
ಏನಿದು ಸಮಸ್ಯೆ?
ಕನಕಪುರ ತಾಲೂಕಿನ ಹಾರೋಹಳ್ಳಿಯ ದೇವರಕಗ್ಗಲಹಳ್ಳಿ ಬಸವನಗುಡಿ ಗ್ರಾಮದಲ್ಲಿ ಕಸ ವಿಲೇವಾರಿ ತೊಟ್ಟಿ ನಿರ್ಮಾಣ ಮಾಡಲು ಚೀಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಉದ್ದೇಶಿಸಿದ್ದು, ಇದಕ್ಕೆ ದೇವರಕಗ್ಗಲಹಳ್ಳಿ ಗ್ರಾಮಸ್ಥರ ವಿರೋಧ ವ್ಯಕ್ತವಾಗುತ್ತಿದೆ.
ಗ್ರಾಮಸ್ಥರ ವಾದವೇನು
ಕಸ ವಿಲೇವಾರಿ ತೊಟ್ಟಿ ನಿರ್ಮಾಣಕ್ಕೆ ಗ್ರಾಮಸ್ಥರು ಏಕೆ ವಿರೋಧಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಗ್ರಾಮಸ್ಥರ ಉತ್ತರವೇನೆಂದರೆ ಪಂಚಾಯಿತಿಯವರು ತೊಟ್ಟಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗ ಗ್ರಾಮದ ಒಳಗಡೆಯೇ ಇದ್ದು ಆ ಜಾಗದಿಂದ ನಾವು ವಾಸಿಸುತ್ತಿರುವ ಮನೆಗಳು ಕೇವಲ ೧೦ಮೀ ದೂರದಲ್ಲಷ್ಟೇ ಇವೆ ಅಲ್ಲದೇ ಕೆಲವೇ ದೂರದಲ್ಲಿ ದೇವಸ್ಥಾನವೂ ಇದೆ ಹೀಗಿರುವಾಗ ಆಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವುದು ಸರಿಯೇ ಎಂಬುದು ಗ್ರಾಮಸ್ಥರ ವಾದವಾಗಿದೆ.
ಈ ಹಿಂದೆಯೂ ವಿರೋಧ ವ್ಯಕ್ತವಾಗಿತ್ತು;
ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿರುವುದು ಎರಡನೇ ಬಾರಿ. ಮೊದಲ ಬಾರಿ ಕಾಳೇಗೌಡನದೊಡ್ಡಿ ಗ್ರಾಮದ ಸಮೀಪ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಅಲ್ಲಿಯೂ ಕೂಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಘಟಕವನ್ನು ಎತ್ತಂಗಡಿ ಮಾಡಿಸುವ ಕೆಲಸ ಮಾಡಿದ್ದರು. ಇಲ್ಲಿಯೂ ಕೂಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು ಅಧಿಕಾರಿಗಳು ಇನ್ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.
ಪಿಡಿಒ ವಿರುಧ್ಧ ಆಕ್ರೋಷ;

ಫ್ರೆಶ್ ನ್ಯೂಸ್

Latest Posts

Featured Videos