ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

ಕೋಲಾರ: ನವೆಂಬರ್ ೨೦ ರವರೆವಿಗೂ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಸ್ಮರಣಾರ್ಥ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಸಪ್ತಾಹವನ್ನು ಮನೆಗೊಬ್ಬ ಸದಸ್ಯ, ಸದಸ್ಯನಿಗೊಂದು ಪುಸ್ತಕ ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆಯೆಂದು ಗ್ರಂಥಾಲಯ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ದಿವಾಕರ್ ತಿಳಿಸಿದರು.
ಕೋಲಾರದಲ್ಲಿ ಶನಿವಾರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಮಾತನಾಡಿದರು. ಸಾರ್ವಜನಿಕ ಗ್ರಂಥಾಲಯಗಳು ಈಗ ಡಿಜಿಟಲ್ ಗ್ರಂಥಾಲಯಗಳಾಗುತ್ತಿವೆ. ಓದುಗರು ಮೊಬೈಲ್, ಟ್ಯಾಬ್ ಹಾಗೂ ಲ್ಯಾಪಟಾಪ್,ಕಂಪ್ಯೂಟರ್‌ಗಳ ಮೂಲಕ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿಯನ್ನು ಗೂಗಲ್‌ನಲ್ಲಿ ಜಾಲಾಡಿ ನೋಂದಣಿಯಾಗುವ ಮೂಲಕ ಉಚಿತವಾಗಿ ಸಾವಿರಾರು ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆಯೆಂದರು.
ಈಗಾಗಲೇ ರಾಜ್ಯಾದ್ಯಂತ ನೂರಾರು ಮಂದಿ ಡಿಜಿಟಲ್ ಗ್ರಂಥಾಲಯದ ಸದಸ್ಯರಾಗಿ ಸೇವೆ ಪಡೆಯುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸಪ್ತಾಹದ ಅಭಿಯಾನದಡಿ ನವೆಂಬರ್ ಮಾಸದಲ್ಲಿಯೇ ೧೦ ಸಾವಿರ ನೋಂದಣಿ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ, ವಿಶೇಷ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಯೆಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos