ಅವಿನಾಶ ಪರಿಶೀಲನೆಯ ರಾಷ್ಟ್ರೀಯ ಸಮ್ಮೇಳನ ಮತ್ತು ವಸ್ತು ಪ್ರದರ್ಶನ

ಅವಿನಾಶ ಪರಿಶೀಲನೆಯ ರಾಷ್ಟ್ರೀಯ ಸಮ್ಮೇಳನ ಮತ್ತು ವಸ್ತು ಪ್ರದರ್ಶನ

 ಬೆಂಗಳೂರು,ನ. 26: ಇಂಡಿಯನ್ ಸೊಸೈಟಿ ಫಾರ್ ನಾನ್ ಡಿಸ್ಟ್ರಕ್ಟಿವ್ ಟೆಸ್ಟಿಂಗ್ ಅವರಿಂದ ಆಯೋಜಿಸಲ್ಪಟ್ಟಿರುವ ಈ ರಾಷ್ಟ್ರೀಯ ಸಮ್ಮೇಳನ 3೦ ವರ್ಷಗಳ ದೀರ್ಘ ಕಾಲದ ಬಳಿಕ ಡಿಸೆಂಬರ್ 5 ರಿಂದ 7ನೇ ತಾರೀಖಿನವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.

ನಗರದ ಪ್ರೆಸ್ ಕ್ಲಬ್ ನ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಶಶಿಧರ್ ಪಲ್ಲಕ್ಕಿ ಅವರು  ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ 3೦ಕ್ಕೂ ಹೆಚ್ಚು ವಿಶೇಷ ಉಪಕರಣಗಳನ್ನು ಹೊಂದಿರುವ ವಸ್ತು ಪ್ರದರ್ಶನದ ಮಳಿಗೆಗಳನ್ನು ಕಾಣಬಹುದಾಗಿದೆ. ವಸ್ತು ಪ್ರದರ್ಶನದ ಚರ್ಚೆಯ ವಿಷಯವನ್ನು ವಿಶ್ವ ಪರಿಶೀಲನೆಯಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ತತ್ವಗಳಿಗನುಸಾರವಾಗಿ ಆಯ್ಕೆ ಮಾಡಲಾಗಿದ್ದು, 8೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟಿçÃಯ ಮತ್ತು ಅಂತರ ರಾಷ್ಟ್ರೀಯ ಪ್ರತಿನಿಧಿಗಳು ಮೂರು ದಿನದ ಸಂಭ್ರಮಕ್ಕೆ ಸಾಕ್ಷೀಕರಿಸಲಿದ್ದಾರೆ  ಎಂದು ಹೇಳಿದರು.

ಎನ್ ಡಿ ಟಿ- ನಾನ್ ಡಿಸ್ಟ್ರಕ್ಟಿವ್ ಟೆಸ್ಟಿಂಗ್  ಕನ್ನಡಲ್ಲಿ ಅವಿನಾಶ್ ಪರಿಶೀಲನೆ ಎಂದು ಕರೆಯಲ್ಪಡುವ ವಿಶೇಷ ಕೆಲಸವು ಪ್ರಮುಖವಾಗಿ ಕೈಗಾರಿಕಾ ವಲಯದಲ್ಲಿ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ, ವೈಮಾನಿಕ ಕ್ಷೇತ್ರ, ವಾಹನ ತಯಾರಿಕೆ, ತೈಲ ಪರಿಷ್ಕರಣೆ ಮುಂತಾದ ವಲಯಗಳ ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಪರೀಕ್ಷೆಗೆ ಒಳಪಡಿಸಿ, ಬಿಡಿಭಾಗಗಳಲ್ಲಿ ದೋಷವಿರುವದನ್ನು ಕಂಡುಹಿಡಿಯಲು ಪ್ರಮುಖವಾಗಿ  ಉಪಯೋಗಿಸುತ್ತಾರೆ.

ಪ್ರಮುಖವಾಗಿ ಈ ಸಮ್ಮೇಳನವು ಮೂರು ರೀತಿಯಲ್ಲಿ ನಡೆಯಲಿದ್ದು, ಮೊದಲನೆಯದಾಗಿ ಪೂರ್ವಭಾಗಿ ಸಮ್ಮೇಳನವು ಆನಂದ್ ರಾವ್ ವೃತ್ತದ ಬಳಿ ನಡೆಯಲಿದೆ. ಹಾಗೂ 2ನೇ ಮತ್ತು 3ನೇ ಕಾರ್ಯಕ್ರವು ದೇವನಹಳ್ಳಿ ವಿಮಾನ ನಿಲ್ದಾಣ ಬಳಿ ನಡಿಯಲಿದೆ ಎಂದು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos